ಅಂತರಿಕ್ಷದಲ್ಲಿ ಮೊಳಕೆಯೊಡೆದ ಮೆಂತ್ಯ, ಹೆಸರುಕಾಳು – ಭಾರತದ ಶುಭಾಂಶು ಶುಕ್ಲಾ ಪ್ರಯೋಗ ಸಕ್ಸಸ್

Public TV
1 Min Read

– ಗಗನಯಾನ ಪ್ರೊಪಲ್ಷನ್ ಸಿಸ್ಟಮ್ ಹಾಟ್ ಟೆಸ್ಟ್ ಯಶಸ್ವಿ

ನವದೆಹಲಿ: ಆಕ್ಸಿಯಮ್-4 ಮಿಷನ್‌ನಡಿ ವಿವಿಧ ಪ್ರಯೋಗಗಳನ್ನು ನಡೆಸಲು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ತೆರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla), ಅಂತರಿಕ್ಷದಲ್ಲಿ ಹೆಸರುಕಾಳು ಹಾಗೂ ಮೆಂತ್ಯ ಬೀಜಗಳನ್ನು ನೆಟ್ಟು ಮೊಳಕೆಯೊಡೆಸುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದಕ್ಕೆ ಸಂಬಂಧಿತ ಚಿತ್ರಗಳನ್ನು ಶುಭಾಂಶು ಶುಕ್ಲಾ ಹಂಚಿಕೊಂಡಿದ್ದಾರೆ.

ಬಾಹ್ಯಾಕಾಶ ಕೇಂದ್ರದಲ್ಲಿ ಮೊಳಕೆ ಪ್ರಯೋಗಕ್ಕೆ ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ರವಿಕುಮಾರ್ ಹೊಸಮನಿ ಮತ್ತು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಸುಧೀರ್ ಸಿದ್ಧಾಪುರರೆಡ್ಡಿ ಎಂಬ ಇಬ್ಬರು ವಿಜ್ಞಾನಿಗಳು ನೇತೃತ್ವ ವಹಿಸಿದ್ದಾರೆ. ಶುಕ್ಲಾ ಹಾಗೂ ಇತರ ನಾಲ್ವರು ಗಗನಯಾತ್ರಿಗಳು ಕಕ್ಷೆಯ ಪ್ರಯೋಗಾಲಯದಲ್ಲಿ 12 ದಿನಗಳನ್ನು ಕಳೆದಿದ್ದಾರೆ. ನಾಳೆಯ ಬಳಿಕ ಯಾವಾಗಾ ಬೇಕಾದ್ರೂ ನಾಲ್ವರು ಗಗನಯಾತ್ರಿಗಳು ಭೂಮಿಗೆ ವಾಪಸ್ ಬರಬಹುದು. ಇದನ್ನೂ ಓದಿ: ವಿಜಯಪುರ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

ಇನ್ನೂ, ಗಗನಯಾನ ಪ್ರೊಪಲ್ಷನ್ ಸಿಸ್ಟಮ್‌ನ ಹಾಟ್ ಟೆಸ್ಟ್ ಯಶಸ್ವಿಯಾಗಿದೆ. ಈ ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ. ಜುಲೈ 3ರಂದು ಮಹೇಂದ್ರಗಿರಿಯಲ್ಲಿರುವ ಪ್ರೊಪಲ್ಷನ್ ಕಾಂಪ್ಲೆಕ್ಸ್‌ನಲ್ಲಿ ಮಾನವಸಹಿತ ಬಾಹ್ಯಾಕಾಶ ಕಾರ್ಯಕ್ರಮ `ಗಗನಯಾನದ’ `ಸರ್ವೀಸ್ ಮಾಡ್ಯೂಲ್ ಪ್ರೊಪಲ್ಷನ್ ಸಿಸ್ಟಮ್’ನ ಮತ್ತೆ ಎರಡು ಹಾಟ್ ಟೆಸ್ಟ್‌ಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕ್ರಮವಾಗಿ 30 ಹಾಗೂ 10 ಸೆಕೆಂಡುಗಳ ಕಾಲ ನಡೆದ ಈ ಅಲ್ಪಾವಧಿಯ ಪರೀಕ್ಷೆಗಳು, ಸಂರಚನೆಯ ಕ್ಷಮತೆಯನ್ನು ಹೊಂದಿದ್ದವು ಎಂದು ಇಸ್ರೋ ತಿಳಿಸಿದೆ. ಈ ಪರೀಕ್ಷೆಗಳ ಯಶಸ್ಸಿನೊಂದಿಗೆ ಸದ್ಯದಲ್ಲೇ ಪೂರ್ಣ ಪ್ರಮಾಣದ ಹಾಟ್ ಟೆಸ್ಟ್ ನಡೆಸುವುದಾಗಿ ಇಸ್ರೋ ತಿಳಿಸಿದೆ. ಇದನ್ನೂ ಓದಿ: Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

Share This Article