ಮೈಸೂರು: ಸರ್ಕಾರಿ ಕಚೇರಿಯಲ್ಲೇ (Government Office) ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನ ವರುಣಾ ಪಂಚಾಯತಿಯಲ್ಲಿ ನಡೆದಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿನ ವರುಣಾ ಪಟ್ಟಣ ಪಂಚಾಯತಿ ಕಾರ್ಯದರ್ಶಿ ದಿವ್ಯಾಗೆ ಆತ್ಮಹತ್ಯೆಗೆ ಯತ್ನಿಸಿದವರು. ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾಗ್ತಿದೆ, ವಾಪಸ್ ಪಡೆಯಿರಿ – ಪ್ರೊ.ರವಿವರ್ಮ ಕುಮಾರ್
ಪಂಚಾಯ್ತಿಯಲ್ಲೇ ನಿದ್ರೆ ಮಾತ್ರೆ ಸೇವನೆ ಮಾಡಿದ್ದು, ಬಳಿಕ ದಿವ್ಯಾರನ್ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ವರ್ಗಾವಣೆ ವಿಚಾರವಾಗಿ ಮಾನಸಿಕ ಕಿರುಕುಳ ಇತ್ತು ಎಂಬ ಆರೋಪವಿದೆ.
ಜ್ಞಾನ ತಪ್ಪಿ ಬಿದ್ದಿದ್ದ ದಿವ್ಯಾರನ್ನ ಸಹ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವರುಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಿಧಾನಸೌಧ ಮುಂದೆ ನೇಪಾಳಿ ಗ್ಯಾಂಗ್ ಪುಂಡಾಟ – 11 ಆರೋಪಿಗಳು ಅರೆಸ್ಟ್

