ಬೆಂಗಳೂರು: ಡಿಜಿಪಿ ಅಲೋಕ್ ಕುಮಾರ್ ಜೈಲುಗಳಲ್ಲಿನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡ್ತಿದ್ದಾರೆ. ಈ ಮಧ್ಯೆ ಜೈಲಿನಲ್ಲಿ ಮಹಿಳಾ ಖೈದಿಗಳ ಡ್ರಗ್ಸ್ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಹೌದು, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲಿನಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ದರು. ಆದರೆ ಇದೀಗ ಜೈಲಿನ ಬ್ಯಾರಕ್ಗಳ ಒಳಗೆ ನಶೆ ಏರಿಸುವ ಡ್ರಗ್ಸ್ನ್ನು ಇನ್ನೂ ಬಚ್ಚಿಟ್ಟಿರುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ, ಮಹಿಳಾ ಖೈದಿಗಳಿಗೆ ನಡೆಸಿದ ಡ್ರಗ್ಸ್ ಪರೀಕ್ಷೆಗಳಲ್ಲಿ ಆಘಾತಕಾರಿ ಫಲಿತಾಂಶಗಳು ಹೊರಬಿದ್ದಿವೆ. ಇದನ್ನೂ ಓದಿ: ಉಪಚುನಾವಣೆ| ಸಿಎಂ ಕಚೇರಿಯಲ್ಲಿ ಸಂಧಾನ ಸಭೆಗೆ ವ್ಯಾಪಕ ಟೀಕೆ
ಕೆಲ ಮಹಿಳಾ ಖೈದಿಗಳ ಡ್ರಗ್ ಪರೀಕ್ಷಾ ವರದಿಗಳು ಪಾಸಿಟಿವ್ ಬಂದಿರುವುದನ್ನು ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಮಹಿಳಾ ಬ್ಯಾರಕ್ಗಳೊಳಗೆ ಡ್ರಗ್ಸ್ ಹೇಗೆ ತಲುಪಿದವು ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಪುರುಷ ಕೈದಿಗಳಷ್ಟೇ ಅಲ್ಲದೆ, ಮಹಿಳಾ ಕೈದಿಗಳಿಂದಲೂ ಡ್ರಗ್ಸ್ ಸೇವನೆ ನಡೆದಿರುವ ಸಾಧ್ಯತೆ ಇದ್ದು, ಸೆಕೆಂಡ್ ಒಪೀನಿಯನ್ಗಾಗಿ ನಿಮ್ಹಾನ್ಸ್ಗೆ ವರದಿ ಕಳಿಸಲಾಗಿದೆ.
ಇದಲ್ಲದೆ, ಸುಮಾರು 20 ಕೈದಿಗಳು ಮೂತ್ರ ಮಾದರಿ ನೀಡಲು ನಿರಾಕರಿಸಿದ್ದಾರೆ. ಡ್ರಗ್ಸ್ ಪರೀಕ್ಷಾ ವರದಿ ಪಾಸಿಟಿವ್ ಬರುವ ಭೀತಿಯಿಂದಲೇ ಅವರು ಯೂರಿನ್ ನೀಡಲು ಹಿಂದೇಟು ಹಾಕಿದ್ದು, ಜೈಲು ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ ಎನ್ನಲಾಗಿದೆ. ಸದ್ಯ, ಈ ಕೈದಿಗಳ ಮನವೊಲಿಸಿ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.ಇದನ್ನೂ ಓದಿ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಕೇಸ್ – ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆ

