3 ತಿಂಗಳು ಕಾಲೇಜಲ್ಲಿ ವಿದ್ಯಾರ್ಥಿನಿಯಂತೆ ನಟಿಸಿ ರ‍್ಯಾಗಿಂಗ್ ಪ್ರಕರಣವನ್ನು ಭೇದಿಸಿದ ಮಹಿಳಾ ಪೇದೆ

Public TV
2 Min Read

ಭೋಪಾಲ್: ಮಹಿಳಾ ಪೇದೆಯೊಬ್ಬರು (Female Constable) 3 ತಿಂಗಳ ಕಾಲ ಕಾಲೇಜೊಂದರಲ್ಲಿ (College) ವಿದ್ಯಾರ್ಥಿನಿಯಂತೆಯೇ (Student) ನಟಿಸಿ, ಸಿನಿಮೀಯ ರೀತಿಯಲ್ಲಿ ರ‍್ಯಾಗಿಂಗ್ ಪ್ರಕರಣವನ್ನು (Ragging Case) ಭೇದಿಸಿರುವ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿನ ಸರ್ಕಾರಿ ಮಹಾತ್ಮ ಗಾಂಧಿ ಮೆಮೊರಿಯಲ್ (MGM) ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣವನ್ನು ಭೇದಿಸಲು ಮಹಿಳಾ ಪೊಲೀಸ್ ಪೇದೆ 3 ತಿಂಗಳ ಕಾಲ ವೈದ್ಯಕೀಯ ವಿದ್ಯಾರ್ಥಿನಿಯಂತೆ ನಟಿಸಿದ್ದರು ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿಗಳ ಪ್ರಕಾರ ಕೆಲ ತಿಂಗಳ ಹಿಂದೆ ಕಾಲೇಜಿನ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯದ ಧನಸಹಾಯ ಆಯೋಗದ (UGC) ಸಹಾಯವಾಣಿಗೆ ರ‍್ಯಾಗಿಂಗ್ ಬಗ್ಗೆ ದೂರು ನೀಡಿದ್ದ. ಬಳಿಕ ಸಂಸ್ಥೆಯ ಆಡಳಿತ ಜುಲೈ 24 ರಂದು ಅಪರಿಚಿತ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ಯುಜಿಸಿ ಸಹಾಯವಾಣಿಗೆ ಬಂದಿದ್ದ ದೂರಿನಲ್ಲಿ ರ‍್ಯಾಗಿಂಗ್ ಘಟನೆಯ ಬಗ್ಗೆ ಸಂಪೂರ್ಣ ವಿವರ ನೀಡಲಾಗಿತ್ತು. ಆದರೆ ಆರೋಪಿ ಹಾಗೂ ದೂರುದಾರರ ಹೆಸರನ್ನು ಉಲ್ಲೇಖಿಸಲಾಗಿರಲಿಲ್ಲ. ದೂರು ನೀಡಿದ ವಿದ್ಯಾರ್ಥಿಯ ಫೋನ್ ನಂಬರ್ ಕೂಡಾ ಬಹಿರಂಗಪಡಿಸಲಾಗಿರಲಿಲ್ಲ. ಈ ಹಿನ್ನೆಲೆ ಪ್ರಕರಣವನ್ನು ಭೇದಿಸಲು ಪೊಲೀಸ್ ಅಧಿಕಾರಿಯೊಬ್ಬರನ್ನು ಕಾಲೇಜಿಗೆ ವಿದ್ಯಾರ್ಥಿಯ ವೇಷದಲ್ಲಿ ಕಳುಹಿಸಬೇಕಾಯಿತು ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಉಸ್ತುವಾರಿ ತಹಜೀಬ್ ಖಾಜಿ ತಿಳಿಸಿದ್ದಾರೆ.

ಪ್ರಕರಣದ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾನ್‌ಸ್ಟೆಬಲ್ ಶಾಲಿನಿ ಚೌಹಾಣ್ (24) ಅವರನ್ನು ಮೊದಲಿಗೆ ಕಾಲೇಜಿಗೆ ವಿದ್ಯಾರ್ಥಿನಿಯ ರೂಪದಲ್ಲಿ ಕಳುಹಿಸಲಾಗಿತ್ತು. ಅವರು ವೈದ್ಯಕೀಯ ವಿದ್ಯಾರ್ಥಿಯಂತೆ ನಟಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಪ್ರಕರಣದ ಬಗ್ಗೆ ಇನ್ನಷ್ಟು ಆಳವಾಗಿ ತನಿಖೆ ನಡೆಸಲು ಇನ್ನೊಬ್ಬ ಮಹಿಳಾ ಸಿಬ್ಬಂದಿಯನ್ನು ನರ್ಸ್ ವೇಷದಲ್ಲಿ ಕಳುಹಿಸಲಾಯಿತು. ಬಳಿಕ ಇನ್ನಿಬ್ಬರು ಕಾನ್‌ಸ್ಟೇಬಲ್‌ಗಳನ್ನು ಕ್ಯಾಂಟೀನ್ ಕೆಲಸಗಾರರಂತೆ ಕಾಲೇಜಿಗೆ ಕಳುಹಿಸಲಾಯಿತು ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ- ವ್ಯಕ್ತಿಯ ಬರ್ಬರ ಕೊಲೆ

ಮಾರುವೇಷದಲ್ಲಿ ಹೋಗಿದ್ದ ಪೊಲೀಸರು ತನಿಖೆಯ ವೇಳೆ ಅಪರಾಧವನ್ನು ದೃಢಪಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ 11 ವಿದ್ಯಾರ್ಥಿಗಳನ್ನು ಪೊಲೀಸರು ಗುರುತಿಸಿದ್ದಾರೆ. ಆರೋಪಿ ಸೀನಿಯರ್ ವಿದ್ಯಾರ್ಥಿಗಳು ತಮ್ಮ ಜೂನಿಯರ್‌ಗಳಿಗೆ ಅಶ್ಲೀಲ ಕೃತ್ಯವನ್ನು ಮಾಡುವಂತೆ ಒತ್ತಾಯಿಸಿ ರ‍್ಯಾಗಿಂಗ್ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದೀಗ ಕ್ರಿಮಿನಲ್ ಪ್ರೊಸೀಜರ್ ಕೋಡ್ (CRPC) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಆರೋಪಪಟ್ಟಿ ಸಲ್ಲಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ. ಕಾಲೇಜು ಆಡಳಿತ ಕಳೆದ ವಾರ ಆರೋಪಿ ವಿದ್ಯಾರ್ಥಿಗಳನ್ನು 3 ತಿಂಗಳ ಕಾಲ ಕಾಲೇಜಿನಿಂದ ಅಮಾನತುಗೊಳಿಸಿದೆ. ಇದನ್ನೂ ಓದಿ: ನರ್ಸಿಂಗ್ ಕಾಲೇಜಿನಲ್ಲಿ ಮಾಸ್ ಕಾಪಿ – 10 ಸಾವಿರ ವಸೂಲಿ ಮಾಡಿ ಪರೀಕ್ಷೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *