ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು – 9 ಕ್ಕೇರಿದ ಸಾವಿನ ಸಂಖ್ಯೆ

Public TV
2 Min Read

ಭೋಪಾಲ್: ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park) ಬುಧವಾರ ಮತ್ತೊಂದು ಚೀತಾ (Cheetah) ಸಾವನ್ನಪ್ಪಿದ್ದು, ಐದು ತಿಂಗಳಲ್ಲಿ ಚೀತಾಗಳ ಸಾವಿನ ಸಂಖ್ಯೆ ಒಂಭತ್ತಕ್ಕೆ ಏರಿದೆ.

ಇಂದು ಬೆಳಗ್ಗೆ ಹೆಣ್ಣು ಚಿರತೆ ಧಾತ್ರಿ (ತಿಬ್ಲಿಸಿ) ಶವವಾಗಿ ಪತ್ತೆಯಾಗಿದೆ. ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚೀತಾಗಳ ಸಾವು ಉತ್ತಮ ಬೆಳವಣಿಗೆಯಲ್ಲ: ಸುಪ್ರೀಂ

ಏಳು ಗಂಡು, ಆರು ಹೆಣ್ಣು ಮತ್ತು ಒಂದು ಹೆಣ್ಣು ಮರಿ ಸೇರಿ ಒಟ್ಟು 14 ಚೀತಾಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದ ಬೊಮಾಸ್‌ನಲ್ಲಿ ಇರಿಸಲಾಗಿದ್ದು, ಅವುಗಳ ಆರೋಗ್ಯದ ಬಗ್ಗೆ ಉದ್ಯಾನದ ವನ್ಯಜೀವಿ ಪಶುವೈದ್ಯರು ಹಾಗೂ ನಮೀಬಿಯಾದ ತಜ್ಞರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಎರಡು ಹೆಣ್ಣು ಚೀತಾಗಳು ಬಯಲಿನಲ್ಲಿದ್ದು, ಅವುಗಳಲ್ಲಿ ಒಂದು ಶವವಾಗಿ ಪತ್ತೆಯಾಗಿದೆ.

ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನದಲ್ಲಿ ಸಾವನ್ನಪ್ಪಿದ ಒಂಭತ್ತು ಚೀತಾಗಳಲ್ಲಿ ಮೂರು ಮರಿಗಳು ಸೇರಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ತರಲಾದ 20 ಚೀತಾಗಳನ್ನು ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿತ್ತು. ಅಂದಿನಿಂದ ಅಲ್ಲಿ ನಾಲ್ಕು ಮರಿಗಳು ಜನಿಸಿದ್ದವು. ಇದನ್ನೂ ಓದಿ: ಕಳವಳ ಉಂಟುಮಾಡಿದ ರೇಡಿಯೋ ಕಾಲರ್ – ಮತ್ತೊಂದು ಚೀತಾ ಕತ್ತಿನಲ್ಲಿ ತೀವ್ರ ಗಾಯಗಳು ಪತ್ತೆ

ಕಳೆದ ತಿಂಗಳು ನಾಲ್ಕು ದಿನಗಳ ಅಂತರದಲ್ಲಿ ಎರಡು ಗಂಡು ಚೀತಾಗಳು ಸಾವನ್ನಪ್ಪಿದ್ದು, ತೇಜಸ್ ಹೆಸರಿನ ಚೀತಾ ಜುಲೈ 11 ರಂದು ಸಾವನ್ನಪ್ಪಿತ್ತು. ಜುಲೈ 14 ರಂದು ಸೂರಜ್ ಹೆಸರಿನ ಚೀತಾದ ಶವ ಪತ್ತೆಯಾಗಿತ್ತು. ಇದಕ್ಕೂ ಮೊದಲು ಮಾರ್ಚ್ 27 ರಂದು ಸಶಾ ಎಂಬ ಹೆಣ್ಣು ಚೀತಾ ಮೂತ್ರಪಿಂಡದ ಕಾಯಿಲೆಯಿಂದ ಮೃತಪಟ್ಟಿತ್ತು. ಉದಯ್ ಹೆಸರಿನ ಚೀತಾ ಏಪ್ರಿಲ್ 23 ರಂದು ಹೃದಯ-ಶ್ವಾಸಕೋಶದ ವೈಫಲ್ಯದಿಂದ ಸಾವನ್ನಪ್ಪಿತ್ತು. ದಕ್ಷಾ ಹೆಸರಿನ ಹೆಣ್ಣು ಚೀತಾ ಮೇ 9 ರಂದು ಸಾವಿಗೀಡಾಗಿತ್ತು. ಹವಾಮಾನ ವೈಪರೀತ್ಯ ಮತ್ತು ನಿರ್ಜಲೀಕರಣದಿಂದ ಮೇ 25 ರಂದು ಎರಡು ಚಿರತೆ ಮರಿಗಳು ಹಾಗೂ ಮೇ 23 ರಂದು ಮತ್ತೊಂದು ಮರಿ ಸಾವನ್ನಪ್ಪಿದ್ದವು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್