ಪಾಕ್‌ಗೆ ಬೆಂಬಲಿಸಿದ ಟರ್ಕಿಯಲ್ಲಿ ಸಿನಿಮಾ ಶೂಟಿಂಗ್ ಬೇಡ – ಭಾರತೀಯ ಚಿತ್ರರಂಗ ನಿರ್ಧಾರ

Public TV
1 Min Read

– ಸಿನಿಮಾಗಿಂತಲೂ ದೇಶವೇ ಮುಖ್ಯ ಅಂತ ಖಡಕ್ ಸಂದೇಶ ರವಾನೆ

‘ಆಪರೇಷನ್ ಸಿಂಧೂರ’ (Operation Sindoor) ಕಾರ್ಯಾಚರಣೆಯಲ್ಲಿ ಉಗ್ರ ಪೋಷಕ ಪಾಕಿಸ್ತಾನಕ್ಕೆ (Pakistan) ಬೆಂಬಲಿಸಿದ ಟರ್ಕಿಗೆ (Turkey) ಭಾರತೀಯ ಚಿತ್ರರಂಗ ಬಿಸಿ ಮುಟ್ಟಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್ ಕುತಂತ್ರದ ಬೆನ್ನಲ್ಲೇ ಸಿನಿಮಾ ರಂಗ ಮಹತ್ವದ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ:ಕುಂಭಮೇಳದ ನೀಲಿ ಕಂಗಳ ಚೆಲುವೆಗೆ ಬಿಗ್ ಚಾನ್ಸ್- ಫ್ಯಾನ್ಸ್‌ಗೆ ಗುಡ್ ನ್ಯೂಸ್

ಪಾಕ್ ಬೆಂಬಲಕ್ಕೆ ನಿಂತಿರೋ ಟರ್ಕಿಗೆ ಭಾರತ ಪಾಠ ಕಲಿಸಲು ಮುಂದಾಗಿದೆ. ಟರ್ಕಿ ಮತ್ತು ಅಜರ್‌ಬೈಜಾನ್‌ನಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಮಾಡದಿರಲು ‘ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್’ ಕಡೆಯಿಂದ ಭಾರತೀಯ ಚಿತ್ರರಂಗ ನಿರ್ಮಾಪಕರಿಗೆ ಪತ್ರದ ಮೂಲಕ ತಿಳಿಸಲಾಗಿದೆ. ಇದನ್ನೂ ಓದಿ:13 ವರ್ಷಗಳ ಬಳಿಕ ಟಾಲಿವುಡ್‌ಗೆ ಕನ್ನಡದ ‘ಸತ್ಯ ಇನ್ ಲವ್’ ನಟಿ

ಈ ಎರಡು ದೇಶಗಳ ಜೊತೆ ನಂಟು ಇಟ್ಟುಕೊಳ್ಳದಂತೆ ನಿರ್ದೇಶಕ, ನಿರ್ಮಾಪಕರಿಗೆ ತಿಳಿಸಲಾಗಿದೆ. ಸಿನಿಮಾಗಿಂತಲೂ ದೇಶವೇ ಮುಖ್ಯ. ಟರ್ಕಿ ಜೊತೆ ನಂಟು ಇಟ್ಟುಕೊಂಡರೆ, ಇದರಿಂದ ಭಾರತದ ಭದ್ರತೆ ತೊಂದರೆ ಅಂತ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಸಾಥ್ ನೀಡಿದೆ.

ಈಗಾಗಲೇ ಪಾಕ್ ಕಲಾವಿದರು, ತಂತ್ರಜ್ಞರು ಭಾರತೀಯ ಸಿನಿಮಾಗಳಲ್ಲಿ ಕೆಲಸ ಮಾಡದಂತೆ ಬ್ಯಾನ್ ಮಾಡಲಾಗಿದೆ. ಈ ಬೆನ್ನಲ್ಲೇ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.

Share This Article