ಲಕ್ನೋ: ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುತ್ತಿರುವ ಹೊತ್ತಲ್ಲೇ ಗೌತಮ್ ಸಿಂಗ್ ಹೆಸರಿನ ಗೂಂಡಾ ತಾನಾಗೇ ಶರಣಾಗಿರುವ ಘಟನೆ ನಡೆದಿದೆ.
ನನ್ನನ್ನು ಗುಂಡಿಟ್ಟು ಕೊಲ್ಲಬೇಡಿ. ದಯವಿಟ್ಟು ಜೈಲಲ್ಲಿ ಇಡಿ ಎನ್ನುತ್ತಾ ಗೌತಮ್ ಸಿಂಗ್ ಲಕ್ನೋ ಠಾಣೆಗೆ ಹೋಗಿ ಶರಣಾಗಿದ್ದಾನೆ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ಶರಣಾಗುತ್ತಿದ್ದೇನೆ. ನನ್ನನ್ನು ಕೊಲ್ಲಬೇಡಿ ಎಂದು ಬಿತ್ತಿಪತ್ರ ಪ್ರದರ್ಶನ ಮಾಡಿದ್ದಾನೆ. ಇದನ್ನೂ ಓದಿ: ಗುಜರಾತ್ ಶಾಲಾ, ಕಾಲೇಜ್‍ಗಳಲ್ಲಿ ಭಗವದ್ಗೀತೆ ಕಡ್ಡಾಯ
ಇತ್ತೀಚಿಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಯೋಗಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅಲ್ಲಿನ ಕಾನೂನು ಸುವ್ಯವಸ್ಥೆಯೂ ಒಂದು ಕಾರಣ ಎಂದು ಹೇಳಲಾಗುತ್ತಿದೆ. ಸಿಎಂ ಯೋಗಿ ಪವರ್‌ಗೆ ಅವರನ್ನು ಬುಲ್ಡೋಜರ್ ಬಾಬಾ ಎಂದೇ ಕರೆಯಲಾಗುತ್ತಿದೆ. ಇದನ್ನೂ ಓದಿ: 5 ನಿಮಿಷ ಚಾರ್ಜ್ ಮಾಡಿದ್ರೆ 600 ಕಿ.ಮೀ ಸಂಚಾರ – ಹೈಡ್ರೋಜನ್ ಎಲೆಕ್ಟ್ರಿಕ್ ಕಾರು ಬಿಡುಗಡೆ
ತಾನಾಗಿಯೇ ಠಾಣೆಗೆ ಹೋಗಿ ಶರಣಾಗಿರುವ ಗೂಂಡಾನ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.