ಉಪಚುನಾವಣೆಯಲ್ಲಿ ಸೋಲುವ ಭೀತಿಯಿಂದ ವಕ್ಫ್ ಬೋರ್ಡ್ ವಿಚಾರ ಮುನ್ನೆಲೆಗೆ – ದೋಸ್ತಿಗಳ ವಿರುದ್ಧ ಪೊನ್ನಣ್ಣ ಕಿಡಿ

Public TV
1 Min Read

ಬೆಂಗಳೂರು: ಬಿಜೆಪಿ-ಜೆಡಿಎಸ್‌ಗೆ (BJP-JDS) ಉಪಚುನಾವಣೆಯಲ್ಲಿ ಸೋಲುವ ಭೀತಿಯಿದೆ ಅದಕ್ಕಾಗಿ ವಕ್ಫ್ ಬೋರ್ಡ್ ರೈತರ ಜಮೀನು ಕಬಳಿಕೆ ಮಾಡಲು ಮುಂದಾಗಿದೆ ಎಂದು ಸುಳ್ಳು ಹೇಳ್ತಿದ್ದಾರೆ ಎಂದು ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ (Ponnanna) ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಜಯಪುರ (Vijayapura) ರೈತರಿಗೆ ವಕ್ಫ್ ಬೋರ್ಡ್ನಿಂದ ನೋಟಿಸ್ ನೀಡಿರುವ ಬಿಜೆಪಿ-ಜೆಡಿಎಸ್ ವಿರುದ್ಧ ಮಾತನಾಡಿ, ರಾಜಕೀಯ ಪ್ರೇರಿತ ಹೇಳಿಕೆಗಳನ್ನು ಬಿಜೆಪಿ-ಜೆಡಿಎಸ್ ನಾಯಕರು ಕೊಡುತ್ತಿದ್ದಾರೆ. ಎರಡು ಪಕ್ಷಗಳಿಗೆ 3 ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದೆ. ಚುನಾವಣೆ ಬಂದಾಗ ಸಮಾಜ ವಿಭಜನೆ ಮಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಚುನಾವಣೆಗಳಲ್ಲಿ ಧರ್ಮ, ಜಾತಿ ಆಧಾರದಲ್ಲಿ ಮತ ವಿಭಜನೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಸೊಲಿನ ಭೀತಿಯಲ್ಲಿ ಇಂತಹ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ತೀರ್ಪು ಸಿಎಂ ಪಾದಯಾತ್ರೆಗೆ ಸಿಕ್ಕ ಫಲ – ಹೆಚ್.ಕೆ ಪಾಟೀಲ್

ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ. ಅವರ ಜಮೀನು ಪಡೆಯಲು ಮುಂದಾಗಿದೆ ಎನ್ನುವುದು ಸುಳ್ಳು. ಬಿಜೆಪಿ-ಜೆಡಿಎಸ್‌ನವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಚುನಾವಣೆ ಸಮಯದಲ್ಲಿ ನೇರವಾಗಿ ಜನರ ಮುಂದೆ ಹೋಗಬೇಕು. ಸರ್ಕಾರದ ವೈಫಲ್ಯಗಳ ಬಗ್ಗೆ ಹೇಳಬೇಕು. ಅದನ್ನು ಬಿಟ್ಟು ಹೀಗೆ ಸುಳ್ಳು ಹೇಳುವುದು ಸರಿಯಲ್ಲ ಎಂದು ಕಿಡಿಕಾರಿದರು.

ಯಾರು ಏನೇ ಹೇಳಿದರೂ ದಾಖಲೆಯಲ್ಲಿ ಇರಬೇಕು. 15 ಸಾವಿರ ಎಕರೆ ಎಂದು ಯಾರು ಹೇಳಿದ್ದು? ದಾಖಲಾತಿ ತೋರಿಸಿ. ಸಚಿವರೇ ಹೇಳಿದ್ದರೂ ಅವರೇನು ದೇವರಲ್ಲ. ಇವತ್ತಿನ ಕ್ಯಾಬಿನೆಟ್‌ನಲ್ಲಿ ಈ ವಿಷಯ ಚರ್ಚೆ ಆಗುತ್ತದೆ. ಇದಕ್ಕೆ ಸ್ಪಷ್ಟನೆಯನ್ನು ಕೊಡುತ್ತಾರೆ. ಈಗಾಗಲೇ ಡಿಸಿ, ಕಂದಾಯ ಅಧಿಕಾರಿಗಳಿಂದ ದಾಖಲೆಗಳನ್ನು ಕ್ಯಾಬಿನೆಟ್‌ಗೆ ತರಿಸಿದ್ದಾರೆ. ಚರ್ಚೆ ಮಾಡಿ ಸರ್ಕಾರದ ಕಡೆಯಿಂದ ಸ್ಪಷ್ಟನೆ ಕೊಡುತ್ತಾರೆ ಎಂದು ಹೇಳಿದರು.ಇದನ್ನೂ ಓದಿ: ನನ್ನ ವೃತ್ತಿ, ಸಂಭಾವನೆ ಎಲ್ಲ ಬಿಟ್ಟು ಬಂದಿದ್ದೇನೆ: ವಿಜಯ್ ಪವರ್‌ಫುಲ್ ಸ್ಪೀಚ್

Share This Article