ಕಾಶ್ಮೀರದಲ್ಲಿ ಮತ್ತೆ ಭಯ ಮರಳಿದೆ: ಒಮರ್ ಅಬ್ದುಲ್ಲಾ

Public TV
1 Min Read

ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಭಯ ಮರಳಿದೆ ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಮಧ್ಯ ಕಾಶ್ಮೀರದ ಗಂದರ್‍ಬಾಲ್ ಜಿಲ್ಲೆಯ ಪಕ್ಷದ ಜಿಲ್ಲಾ ಕೇಂದ್ರದಲ್ಲಿ ನಡೆದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, 370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಜಮ್ಮು ಮತ್ತು ಕಾಶ್ಮೀರ ಶಾಂತಿ ಮರಳುತ್ತದೆ ಎಂದು ನಾವು ತಿಳಿದುಕೊಂಡಿದ್ದೆವು. ಆದರೆ ಅದು ಸುಳ್ಳು ಆಗಿದೆ. ಕಳೆದ 24 ಗಂಟೆಗಳಲ್ಲಿ, ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಿಬ್ಬಂದಿಯ ಮೇಲೆ ಭಯೋತ್ಪದಕರು ದಾಳಿ ಮಾಡಿದ್ದಾರೆ. ಈ ಪರಿಣಾಮ ನಾವು ಮೂವರು ಪೊಲೀಸರನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಶ್ರೀಗಂಧ ಕಳ್ಳನ ಬಂಧನ – 910 ಕೆಜಿ ಶ್ರೀಗಂಧ ವಶ

ಜನತೆಗೆ ಭದ್ರತೆಯ ಭಾವನೆ ಮೂಡಿಸುವಲ್ಲಿ ಆಡಳಿತ ವಿಫಲವಾಗಿದೆ. ಸರ್ಕಾರ ಸುಮ್ಮನೆ ಬೇರೆ ರೀತಿಯ ಕೆಲಸಕ್ಕೆ ಕೈ ಹಾಕುವುದರ ಬದಲು ನಮ್ಮ ಜನರಿಗೆ ಭದ್ರತೆಯ ಭಾವನೆಯನ್ನು ನೀಡಲು ಮುಂದಾಗಬೇಕು. ಆದರೆ ಇದರಲ್ಲಿ ಭಾರತ ಸರ್ಕಾರ ವಿಫಲವಾಗಿದೆ ಎಂದು ಕಿಡಿಕಾರಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಪಕ್ಷಗಳನ್ನು ಒಗ್ಗೂಡಿಸಿದ್ದಕ್ಕಾಗಿ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಶ್ಲಾಘಿಸಿದ ಒಮರ್, ಎಲ್ಲ ಪಕ್ಷಗಳ ಬಗ್ಗೆ ವಿವರಿಸಿದರು. ಈ ವೇಳೆ ಅಧಿಕಾರದ ಹಿಂದೆ ಎನ್‍ಸಿ ಓಡುತ್ತಿಲ್ಲ. ಬಿಜೆಪಿಯು ಆರ್‍ಎಸ್‍ಎಸ್ ಕೈಯಲ್ಲಿ ಆಡುತ್ತಿರುವ ಪಕ್ಷವಾಗಿದ್ದು, ಪಿಎಜಿಡಿ ಮೈತ್ರಿಯನ್ನು ರಚಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಯೋಗ’ಯೋಗಾ’ – ವಿಯೆಟ್ನಾಂ ಯುವತಿಯ ಕೈಹಿಡಿದ ಹಾವೇರಿಯ ಯುವಕ

ಕೇಂದ್ರವು ಯಾವಾಗಲೂ ಜಮ್ಮು ಮತ್ತು ಕಾಶ್ಮೀರದ ಧ್ವನಿಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ. ನಾವು ವಿಭಜನೆಗೊಂಡರೆ ಕೇಂದ್ರದ ಸಂಚು ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *