ಕೊಪ್ಪಳ; ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಫ್‌ಡಿಎ ಚಿಕಿತ್ಸೆ ಫಲಿಸದೇ ಸಾವು

Public TV
1 Min Read

ಕೊಪ್ಪಳ: ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಶಿಕ್ಷಣ ಇಲಾಖೆಯ ಎಫ್‌ಡಿಎ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಎಫ್‌ಡಿಎ ಸುಂಕಪ್ಪ ಕೊರವರ ಮೃತ ವ್ಯಕ್ತಿ. ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಜು.8 ರಂದು ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಳೆದ ಏಳು ತಿಂಗಳಿಂದ ಸುಂಕಪ್ಪ ಕೊರವರ ಕೆಲಸಕ್ಕೆ ಗೈರಾಗಿದ್ದರು. ಈ ಹಿನ್ನೆಲೆ ಶಿಕ್ಷಣ ಇಲಾಖೆಯಿಂದ ಸಂಬಳ ಆಗಿರಲಿಲ್ಲ. ಸಂಬಳ ಆಗದ ಹಿನ್ನೆಲೆ ಮದ್ಯವ್ಯಸನಿಯಾಗಿದ್ದರು. ಕಳೆದ ಎಂಟರಂದು ಸಂಬಳ ಆಗದ ಹಿನ್ನೆಲೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಶೇ.80 ರಷ್ಟು ಸುಂಕಪ್ಪ ಕೊರವರಗೆ ಗಾಯವಾಗಿತ್ತು. ಎರಡು ದಿನಗಳ ಕಾಲ ಕೊಪ್ಪಳ ‌ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 10 ರಂದು ಕೊಪ್ಪಳದಿಂದ ಸುಂಕಪ್ಪರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು.

Share This Article