ಮಗನ ಸಾವಿನ ನೋವಿನಲ್ಲಿ 6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ

1 Min Read

ಮಾಸ್ಕೋ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು (BMW Car) ಸಮಾಧಿ ಮಾಡಿರುವ ಘಟನೆ ಮಾಸ್ಕೋದಲ್ಲಿ (Moscow) ನಡೆದಿದೆ.

ಈ ಭಾವನಾತ್ಮಕ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಕಾಮೆಂಟ್‌ಗಳು ಹರಿದುಬರುತ್ತಿವೆ. ಇದನ್ನೂ ಓದಿ: ತೈಲಕ್ಕೆ ಹಾಹಾಕಾರ – ಟ್ರಂಪ್‌ ಸಮರಕ್ಕೆ ಕ್ಯೂಬಾ ತತ್ತರ

ತಂದೆ ತನ್ನ ಮಗನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ಬಿಎಂಡಬ್ಲ್ಯೂ ಕಾರು ನೀಡಿದ್ದರು. ಆದರೆ, ಕೆಲವೇ ದಿನಗಳ ನಂತರ ಮಗ ಮೃತಪಟ್ಟಿದ್ದಾನೆ. ಆ ಕಾರು ನೋಡಿದಾಗಲೆಲ್ಲ ಪುತ್ರನ ನೆನೆದು ತಂದೆ ಶೋಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಸಮಾಧಿ ಮಾಡಿದ್ದಾರೆ.

ವ್ಯಕ್ತಿಯ ನಡೆಗೆ ಅನೇಕ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಆ ಕಾರನ್ನು ಮಾರಿ ಬಂದ ಹಣವನ್ನು ಯಾವುದಾದರು ದತ್ತಿ ಸಂಸ್ಥೆಗಳಿಗೆ ನೀಡಬಹುದಿತ್ತು’ ಎಂದು ಕೆಲವರು ಹೇಳಿದ್ದಾರೆ. ‘ಕಾರನ್ನು ಮಾರಾಟ ಮಾಡಿ ಆ ಹಣವನ್ನು ನಿರ್ಗತಿಕರಿಗೆ ದಾನ ಮಾಡಬಹುದಿತ್ತು’ ಎಂದು ಇನ್ನೂ ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇದನ್ನೂ ಓದಿ: ಬಾಂಗ್ಲಾದೇಶ ಮೇಲಿನ ಸುಂಕ ಶೇ.19ಕ್ಕೆ ಇಳಿಸಿದ ಅಮೆರಿಕ – ಭಾರತಕ್ಕೆ ಆತಂಕ

‘ಈ ನಿರ್ಧಾರ ಸರಿಯೋ ತಪ್ಪೋ ಎಂಬುದನ್ನು ಚರ್ಚಿಸಬಹುದು… ಆದರೆ, ದುಃಖ ಆ ತಂದೆಗೆ ಮಾತ್ರ ಗೊತ್ತು. ಅದನ್ನು ಅಳೆಯಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಇನ್ನೂ ಕೆಲವರು ವ್ಯಕ್ತಿಯ ನಡೆ ತಪ್ಪಲ್ಲ ಎಂದು ಕಾಮೆಂಟ್‌ ಮಾಡಿದ್ದಾರೆ.

Share This Article