ಮೊಬೈಲ್ ಕೊಡಿಸದ್ದಕ್ಕೆ ಮಗ ಆತ್ಮಹತ್ಯೆ – ಅದೇ ಹಗ್ಗಕ್ಕೆ ನೇಣು ಬಿಗಿದು ತಂದೆ ಸೂಸೈಡ್

Public TV
1 Min Read

ಮುಂಬೈ: ತಂದೆ ಮೊಬೈಲ್ ಕೊಡಿಸದ್ದಕ್ಕೆ ಮಗ ನೇಣಿಗೆ ಶರಣಾಗಿದ್ದು, ಮಗನ ಸಾವಿನಿಂದ ನೊಂದು ತಂದೆಯೂ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಸೂಸೈಡ್‌ ಮಾಡಿಕೊಂಡ ಘಟನೆ ಮಹಾರಾಷ್ಟ್ರದ (Maharashtra) ನಾಂದೇಡ್‌ನಲ್ಲಿ (Nanded) ನಡೆದಿದೆ.

ವರದಿಗಳ ಪ್ರಕಾರ, ಮಗ ಬುಧವಾರ ಸಂಜೆ ಮೊಬೈಲ್ ಕೊಡಿಸುವಂತೆ ತಂದೆ ಬಳಿ ಹಠ ಮಾಡಿದ್ದಾನೆ. ಆದರೆ ತಂದೆ ತಾನು ಜಮೀನು ಹಾಗೂ ವಾಹನಕ್ಕೆ ಪಡೆದ ಸಾಲವನ್ನು ಮರುಪಾವತಿಸಬೇಕಿದ್ದು, ಮೊಬೈಲ್ ಕೊಡಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದರಿಂದ ಬೇಸರಗೊಂಡ ಮಗ ಮನೆ ಬಿಟ್ಟು ಹೋಗಿದ್ದಾನೆ. ಇದನ್ನೂ ಓದಿ: ಹುಟ್ಟೂರು ಕಲ್ಲಹಳ್ಳಿಯಲ್ಲಿ ನೆರವೇರಿದ ʻಪಬ್ಲಿಕ್ ಟಿವಿ’ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಅಂತ್ಯ ಸಂಸ್ಕಾರ

ಮಗ ಮನೆಗೆ ವಾಪಸ್ ಬಾರದ್ದನ್ನು ಕಂಡು ತಂದೆ ಜಮೀನಿನ ಬಳಿ ತೆರಳಿದಾಗ ಮಗ ನೇಣಿಗೆ ಶರಾಣಾಗಿರುವುದು ಕಂಡುಬಂದಿದೆ. ಇದರಿಂದ ಆಘಾತಗೊಂಡ ತಂದೆ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಮಂದಿ ಇವರನ್ನು ಹುಡುಕಿಕೊಂಡು ಜಮೀನಿನ ಬಳಿ ತೆರಳಿದಾಗ ಇಬ್ಬರೂ ಒಂದೇ ಹಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್‌ಪೋರ್ಟ್‌ ಕೇಂದ್ರ: ಸಿಂಧಿಯಾ ಘೋಷಣೆ

ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ನಾಂದೇಡ್ ಎಸ್ಪಿ ಅಭಿನಾಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಚಿರತೆ ಬಾಲ ಹಿಡಿದು ಎಲ್ಲರನ್ನು ನಿಬ್ಬೆರಗು ಮಾಡಿದ್ದ ಆನಂದ್‌ ಪುತ್ರಿ ಸಾವು

Share This Article