ಚರ್ಚ್‍ನಲ್ಲಿ ತಂದೆಯಿಂದಲೇ ಮಕ್ಕಳ ಕೊಲೆ- ಐವರು ಸಾವು

By
1 Min Read

ಕ್ಯಾಲಿಫೋರ್ನಿಯಾ: ಮೂರು ಮಕ್ಕಳನ್ನು ತಂದೆಯೇ ಗುಂಡಿಕ್ಕಿ ಹತ್ಯೆಗೈದು ತಾನು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯುಎಸ್ ಚರ್ಚ್‍ನಲ್ಲಿ ನಡೆದಿದೆ.

ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದನೇ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾನೆ. ಆದರೆ ಆ ವ್ಯಕ್ತಿಯು ಆ ಮನೆಗೆ ಸಂಬಂಧಿಸಿದ ವ್ಯಕ್ತಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮೂವರು ಮಕ್ಕಳು 15 ವರ್ಷದ ಕೆಳಗಿನವರಾಗಿದ್ದಾರೆ ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ಸಾಜೆರ್ಂಟ್ ರಾಡ್ ಗ್ರಾಸ್‍ಮನ್ ತಿಳಿಸಿದರು. ಇದನ್ನೂ ಓದಿ:  ಬಿಬಿಎಂಪಿಯಲ್ಲಿ ಭ್ರಷ್ಟಾಚಾರ ಬಯಲು- 1000 ಕೋಟಿಗೂ ಅಧಿಕ ಅಕ್ರಮ ಪತ್ತೆ

ಚರ್ಚ್‍ನಲ್ಲಿ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಸ್ಥಳೀಯರಿಂದ ಕರೆಬಂದಿದೆ. ಮೂರು ಗಂಡು ಮಕ್ಕಳ ಮೃತದೇಹವನ್ನು ಈಗಾಗಲೇ ಪರಿಶೀಲಿಸಲಾಗಿದೆ. ನಗರದ ಆರ್ಡೆನ್ ಆರ್ಕೇಡ್ ಪ್ರದೇಶದ ಚರ್ಚ್ ಆಫ್ ಸ್ಯಾಕ್ರಮೆಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮತ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಕ ಸಮಸ್ಯೆಯಿಂದಾಗಿ ಈ ಘಟನೆಯಾಗಿದೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಟ್ವಿಟರ್ ಪೋಸ್ಟ್‌ನಲ್ಲಿ ಈ ಕೊಲೆಗಳನ್ನು ಪ್ರಜ್ಞಾಶೂನ್ಯ ಎಂದು ಕರೆದಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

Share This Article
Leave a Comment

Leave a Reply

Your email address will not be published. Required fields are marked *