ಚಂಡೀಗಢ: ಹರ್ಯಾಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿರುವ ಜೆಜೆಪಿ (ಜನ್ ನಾಯಕ್ ಪಾರ್ಟಿ) ಮುಖ್ಯಸ್ಥ ದುಶ್ಯಂತ್ ಚೌಟಾಲಾ ತಂದೆ ಪೆರೋಲ್ ಮೇಲೆ ತಿಹಾರ್ ಜೈಲಿನಿಂದ ಎರಡು ವಾರಗಳ ಕಾಲ ಹೊರ ಬರಲಿದ್ದಾರೆ.
ದುಶ್ಯಂತ್ ಚೌಟಾಲಾ ತಂದೆ ಅಜಯ್ ಚೌಟಾಲಾ ಜೂನಿಯರ್ ಬೇಸಿಕ್ ಟ್ರೆಂಡ್ (ಜೆಬಿಟಿ) ಶಿಕ್ಷಕರ ಹುದ್ದೆ ಭರ್ತಿಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ತಿಹಾರ್ ಜೈಲು ಸೇರಿದ್ದರು. ಇದೇ ಪ್ರಕರಣದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ ಮತ್ತು ಇಂಡಿಯನ್ ನ್ಯಾಶನಲ್ ಲೋಕದಳ (ಐಎನ್‍ಎಲ್‍ಡಿ) ಅಧ್ಯಕ್ಷ ಓಂಪ್ರಕಾಶ್ ಚೌಟಾಲಾ ಹಾಗೂ ಅವರ ಪುತ್ರ ಅಜಯ್ ಚೌಟಾಲಾಗೆ ಸಿಬಿಐ ವಿಶೇಷ ನ್ಯಾಯಾಲಯ 10 ವರ್ಷ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸಿದೆ.
ತಿಹಾರ್ ಜೈಲಿನಲ್ಲಿರುವ ಅಜಯ್ ಚೌಟಾಲಾರ ಬಳಿ ಮೊಬೈಲ್ ಪತ್ತೆಯಾಗಿತ್ತು. ಅಧಿಕಾರಿಗಳು ಜೂನ್ ನಲ್ಲಿ ಅಜಯ್ ಚೌಟಾಲಾರನ್ನು ಪರಿಶೀಲನೆಗೆ ಒಳಪಡಿಸಿದಾಗ ಮೊಬೈಲ್ ಪತ್ತೆಯಾಗಿತ್ತು. ತಿಹಾರ್ ಜೈಲಿನಲ್ಲಿ ಅಜಯ್ ಚೌಟಾಲಾರಿಗೆ ಫೋನ್ ನೀಡಿದ್ದು ಯಾರು ಎಂಬುದರ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು.