ವಿಮೆ ಹಣದ ಮೇಲೆ ಕಣ್ಣು – ಅಳಿಯನನ್ನೇ ಕೊಲೆ ಮಾಡಿದ ಮಾವ & ಗ್ಯಾಂಗ್

Public TV
2 Min Read

ಹಾವೇರಿ: ಅಳಿಯನ ವಿಮೆ (Insurance) ಹಣದ ಆಸೆಗಾಗಿ ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿರುವ ಮಾವ ಹಾಗೂ ಆತನ ಗ್ಯಾಂಗ್ ಅಂದರ್ ಆಗಿರುವ ಘಟನೆ ಹಾವೇರಿಯಲ್ಲಿ (Haveri) ನಡೆದಿದೆ.

ಜಿಲ್ಲೆ ರಟ್ಟಿಹಳ್ಳಿ (Rattihalli) ಪಟ್ಟಣದ ಬಸವರಾಜ್ ಪುಟ್ಟಪ್ಪನವರ್ (38) ಕೊಲೆಯಾದ ಅಳಿಯ. ಮಾವ ಸಿದ್ದನಗೌಡ, ರಾಘವೇಂದ್ರ ಮಾಳಗೊಂಡರ, ಪ್ರವೀಣ ಹಾಗೂ ಲೋಕೇಶ ಹಲಗೇರಿ ಕೊಲೆ ಮಾಡಿದ ಆರೋಪಿಗಳು. ಇದನ್ನೂ ಓದಿ: ಮೈಸೂರಲ್ಲಿ ಬಲೂನ್ ಮಾರೋ ಹುಡ್ಗಿ ರೇಪ್ & ಮರ್ಡರ್ – ಕೊಳ್ಳೇಗಾಲದಲ್ಲಿ ಆರೋಪಿ ಅರೆಸ್ಟ್‌


ಬಸವರಾಜ್‌ನ ತಂದೆ, ತಾಯಿ ಹಾಗೂ ಸಹೋದರರು ಈ ಹಿಂದೆಯೇ ನಿಧನ ಹೊಂದಿದ್ದರಿಂದ ಒಬ್ಬಂಟಿಯಾಗಿ ಜೀವನ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಬಸವರಾಜ್, ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಮನೆ, ಆಸ್ತಿ ಸಹ ಇತ್ತು.

ಬಸವರಾಜ್ ಮದ್ಯ ವ್ಯಸನಿಯಾಗಿದ್ದನ್ನೇ ಬಂಡವಾಳ ಮಾಡಿಕೊಂಡಿದ್ದ ಮಾವ ಸಿದ್ದನಗೌಡ, ಆತನ 8 ಎಕ್ರೆ ಜಮೀನು ಹಾಗೂ ಮನೆ ಮೇಲೆ ಕಣ್ಣುಹಾಕಿದ್ದ. ಬಸವರಾಜ್‌ನ ಸಹೋದರ ಸಂಬಂಧಿಕರು ಆತನ ಯಾವುದೇ ಆಸ್ತಿ ಮಾರಾಟ ಮಾಡದಂತೆ ಕೋರ್ಟ್ನಿಂದ ಸ್ಟೇ ತಂದಿದ್ದರು. ಇದನ್ನೂ ಓದಿ: ಯಲಹಂಕ ಅಗ್ನಿ ದುರಂತ | ತಾನು ಸುರಿದುಕೊಂಡು ಯುವತಿಗೂ ಪೆಟ್ರೋಲ್ ಹಾಕಲು ಮುಂದಾಗಿದ್ದ ಯುವಕ

ಈ ವಿಚಾರ ತಿಳಿದ ಸಿದ್ದನಗೌಡ, ರಾಘವೇಂದ್ರ ಎಂಬುವವನಿಗೆ 50,000 ರೂ. ಹಣ ನೀಡಿ ಅಪಘಾತ ವಿಮೆ ಮಾಡಲು ಹೇಳಿದ್ದ. ಆಸ್ತಿ ಸಿಗಲ್ಲ ಎಂದು ತಿಳಿದ ಗ್ಯಾಂಗ್ ಇನ್ಶೂರೆನ್ಸ್ ಹಣದ ಆಸೆಗಾಗಿ ಪ್ಲ್ಯಾನ್ ಮಾಡಿ, ಸೆ.27 ರಂದು ಬಸವರಾಜ್‌ನನ್ನು ಮನೆಯಿಂದ ಕರೆದುಕೊಂಡು ಹೋಗಿದ್ದರು. ಬಳಿಕ ಆತನಿಗೆ ಕಂಠಪೂರ್ತಿ ಕುಡಿಸಿ, ಬೈಕ್‌ನಲ್ಲಿ ಊರಿಗೆ ಕಳುಹಿಸಿದ್ದರು. ಬಳಿಕ ಬಸವರಾಜ್ ಹಿಂದೆಯೇ ಕಾರು ತೆಗೆದುಕೊಂಡು ಹೋಗಿ ಡಿಕ್ಕಿ ಹೊಡೆದು, ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಕೊಲೆ ಮಾಡಿ, ಆರೋಪಿಗಳು ಅಪಘಾತ ಎಂದು ಬಿಂಬಿಸಿದ್ದರು.

ಅಪಘಾತದ ಸ್ಥಳಕ್ಕಾಗಮಿಸಿದ್ದ ಬಸವರಾಜ್ ಕುಟುಂಬಸ್ಥರು, ಇದು ಕೊಲೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಪೊಲೀಸರ ತನಿಖೆ ವೇಳೆ ಆಸ್ತಿ, ಮನೆ ಹಾಗೂ ಇನ್ಶೂರೆನ್ಸ್ ಹಣದ ಆಸೆಗಾಗಿ ಆರೋಪಿಗಳು ಕೊಲೆ ಮಾಡಿರುವುದಾಗಿ ಬಯಲಾಗಿದೆ. ಸದ್ಯ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Share This Article