ಕೌಟುಂಬಿಕ ಕಲಹಕ್ಕೆ ಗರ್ಭಿಣಿ ಸೊಸೆಯನ್ನ ಕೊಂದ ಮಾವ – ಆರೋಪಿ ಅರೆಸ್ಟ್

1 Min Read

ರಾಯಚೂರು: ಕೌಟುಂಬಿಕ ಕಲಹಕ್ಕೆ ಗರ್ಭಿಣಿ ಸೊಸೆಯನ್ನ ಮಾವ ಕತ್ತು ಸೀಳಿ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.

25 ವರ್ಷದ ರೇಖಾ ಕೊಲೆಯಾದ ಮಹಿಳೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಆರೋಪಿ ಮಾವನನ್ನು ಸಿದ್ದಪ್ಪ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಹಿರಿಯ ಕಾರ್ಮಿಕ ಹೋರಾಟಗಾರ ಅನಂತ ಸುಬ್ಬರಾವ್ ಹೃದಯಾಘಾತದಿಂದ ನಿಧನ

ಎರಡು ತಿಂಗಳಿಂದ ತವರು ಮನೆಯಲ್ಲಿದ್ದ ಸೊಸೆಯನ್ನ ಮನೆಯಲ್ಲಿ ಯಾರು ಇಲ್ಲದೆ ವೇಳೆ ಮಾವ ಚಾಕುವಿನಿಂದ ಇರಿದು, ಬಳಿಕ ಪರಾರಿಯಾಗಿದ್ದ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದು ನರಳಾಡಿ ಗೃಹಿಣಿ ಪ್ರಾಣ ಬಿಟ್ಟಿದ್ದಾರೆ.

ಆರೋಪಿಯನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಅಂತ ಅಪಮಾನ – ರಣವೀರ್ ಸಿಂಗ್‌ ವಿರುದ್ಧ FIR

Share This Article