ಆನ್‌ಲೈನ್ ಗೇಮ್ ಆಡಲು ಹಣಕ್ಕಾಗಿ ಟಾರ್ಚರ್; ಸ್ವಂತ ಅಳಿಯನನ್ನೇ ಕೊಂದ ಮಾವ

Public TV
1 Min Read

ಬೆಂಗಳೂರು: ಆನ್‌ಲೈನ್ ಗೇಮ್ ಆಡಲು ಹಣ ನೀಡುವಂತೆ ಕಾಟ ಕೊಡುತ್ತಿದ್ದ ಅಕ್ಕನ ಮಗನನ್ನೇ ಮಾವ ಕೊಲೆ ಮಾಡಿ ಸೋಲದೇವನಹಳ್ಳಿ (Soladevanahalli) ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ನಡೆದಿದೆ.

ಅಮೋಘ ಕೀರ್ತಿ (14) ಕೊಲೆಯಾದ ಬಾಲಕ. ನಾಗಪ್ರಸಾದ್ ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಟೋಲ್‌ ಸಿಬ್ಬಂದಿಯನ್ನು ಎಳೆದುಕೊಂಡು ರಸ್ತೆಯಲ್ಲಿ ಡೆಡ್ಲಿರೈಡ್‌

ಕೊಲೆಯಾದ ಬಾಲಕನು ನಾಗಪ್ರಸಾದ್‌ನ ಸಹೋದರಿಯ ಮಗನಾಗಿದ್ದ. ಮೃತ ಬಾಲಕ 8 ತಿಂಗಳಿನಿಂದ ಮಾವ ನಾಗಪ್ರಸಾದ್ ಜೊತೆಗೆ ವಾಸವಿದ್ದ. ಆತ ಫ್ರೀಫೈರ್ ಆನ್‌ಲೈನ್ ಗೇಮಿಂಗ್‌ನ (Online Gaming) ಚಟಕ್ಕೆ ಬಿದ್ದು, ನಿತ್ಯ ಹಣ ಕೊಡುವಂತೆ ಮಾವ ನಾಗಪ್ರಸಾದ್‌ಗೆ ಕಾಟ ಕೊಡುತ್ತಿದ್ದ. ಬಾಲಕನ ಕಾಟಕ್ಕೆ ನಾಗಪ್ರಸಾದ್ ರೋಸಿಹೋಗಿದ್ದ. ಇದನ್ನೂ ಓದಿ: ʼಡೆತ್‌ನೋಟ್‌ʼ ನೋಡಿ ಡೆತ್‌ನೋಟ್‌ ಬರೆದು 14ರ ಬಾಲಕ ಆತ್ಮಹತ್ಯೆ!

ಒಂದು ವಾರದ ಹಿಂದೆ ಮಾವ ನಾಗಪ್ರಸಾದ್ ಬಳಿ ಹಣ ಕೊಡುವಂತೆ ಹೇಳಿ ಬಾಲಕ ಹಲ್ಲೆ ನಡೆಸಿದ್ದ. ಇದರಿಂದ ಮನನೊಂದಿದ್ದ ನಾಗಪ್ರಸಾದ್ ಸೋಮವಾರ ಮುಂಜಾನೆ 4:30ರ ಸುಮಾರಿಗೆ ಬಾಲಕನ ಕತ್ತು ಸೀಳಿ ಕೊಲೆ ಮಾಡಿದ್ದ.

ಕೊಲೆ ಮಾಡಿದ ಬಳಿಕ ಆತನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಬಳಿಕ ಎಲ್ಲಿಗೂ ಹೋಗಲು ಆತನ ಬಳಿ ಹಣವಿಲ್ಲದಿದ್ದ ಕಾರಣ ಮೆಜೆಸ್ಟಿಕ್‌ನಲ್ಲೇ ಮೂರು ದಿನ ಕಾಲ ಕಳೆದಿದ್ದ. ನಂತರ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ ಎನ್ನಲಾಗಿದೆ.

ಇದೀಗ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಿದ್ದಾರೆ.

Share This Article