ಶಾಲೆಗೆ ಹೋಗಲ್ಲ ಅಂದ ಮಗಳನ್ನು ಬೈಕಿನಲ್ಲಿ ಕಟ್ಟಿಕೊಂಡು ಹೋದ ತಂದೆ-ವಿಡಿಯೋ ವೈರಲ್

Public TV
1 Min Read

ಬೀಜಿಂಗ್: ಮೊದಲಿಗೆ ಚಿಕ್ಕ ಮಕ್ಕಳು ಶಾಲೆಗೆ ಹೋಗಲು ಹಠ ಮಾಡೋದು ಸಹಜ. ಮಕ್ಕಳ ಮನವೊಲಿಸಿ ಅವರನ್ನು ಶಾಲೆಗೆ ಕಳುಹಿಸಲು ಪೋಷಕರು ನಾನಾ ಕಸರತ್ತು ಮಾಡ್ತಾರೆ. ಅಂತೆಯೇ ಕೆಲ ಮಕ್ಕಳು ದೊಡ್ಡವರಾದ ಮೇಲೆಯೂ ಶಾಲೆ ಅಂದರೆ ದೂರ ಓಡಿ ಹೋಗುವುದುಂಟು.

ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಣ ಮುಖ್ಯವಾಗಿದ್ದರಿಂದ ಪೋಷಕರು ಶಿಕ್ಷೆ ನೀಡಲು ಆರಂಭಿಸುತ್ತಾರೆ. ಕೆಲವೊಮ್ಮೆ ಪೋಷಕರು ನೀಡುವ ಶಿಕ್ಷೆಗಳು ವಿಚಿತ್ರವಾಗಿದ್ದು, ಸಾರ್ವಜನಿಕರ ಟೀಕೆಗೆ ಒಳಪಡುತ್ತವೆ. ಇದನ್ನೂ ಓದಿ: ಚಲಿಸುತ್ತಿದ್ದ ಸ್ಕೂಟಿ ಹಿಂಬದಿಯಲ್ಲಿ ಕುಳಿತು ಹೋಮ್‍ವರ್ಕ್ ಬರೆದ ಬಾಲಕ: ವಿಡಿಯೋ ನೋಡಿ

ಏಪ್ರಿಲ್ 23ರಂದು ದಕ್ಷಿಣ ಚೀನಾದ ಯುನ್ಫು ಎಂಬಲ್ಲಿ ತಂದೆಯೊಬ್ಬ ತನ್ನ ಮಗಳು ಶಾಲೆಗೆ ಹೋಗ್ತಿಲ್ಲ ಅಂತಾ ಕೋಪದಿಂದ ಆಕೆಯನ್ನು ಬೈಕಿನ ಹಿಂಬದಿಯ ಸೀಟಿಗೆ ಹಗ್ಗದಿಂದ ಕಟ್ಟಿ ಕರೆದುಕೊಂಡು ಹೋಗಿದ್ದಾನೆ. ಜನನಿಬಿಡ ರಸ್ತೆಯಲ್ಲಿ ಮಗಳನ್ನು ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಜನರು ಮೊಬೈಲ್‍ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ವಿಡಿಯೋ ನೋಡಿದ ಜನರು ತಂದೆಯ ಕೆಲಸಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ತಂದೆಯನ್ನು ಕರೆಸಿ ಇನ್ನ್ಮುಂದೆ ಈ ರೀತಿ ಆಗಬಾರದೆಂದು ಮೌಖಿಕವಾಗಿ ಎಚ್ಚರಿಕೆ ನೀಡಿ ಕಳು ಹಿಸಿದ್ದಾರೆ ಎಂದು ವರದಿಯಾಗಿದೆ.

https://youtu.be/EdHAUNaBNpY

Share This Article
Leave a Comment

Leave a Reply

Your email address will not be published. Required fields are marked *