ಮಾತಿನ ಭಾಗದ ಶೂಟಿಂಗ್ ಮುಗಿಸಿದ ಫಾದರ್

Public TV
1 Min Read

ನ್ನಡ ಚಿತ್ರರಂಗದಲ್ಲಿ ಹಲವು ಹೊಸತುಗಳಿಗೆ ನಾಂದಿ ಹಾಡಿರುವ ಆರ್ ಚಂದ್ರು (R. Chandru) ಅವರು ಆರ್ ಸಿ ಸ್ಟುಡಿಯೋಸ್ ಎಂಬ ಬೃಹತ್ ಪ್ಯಾನ್ ಇಂಡಿಯಾ ಚಿತ್ರ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಆ ಮೂಲಕ ಐದು ಚಿತ್ರಗಳ ಶೀರ್ಷಿಕೆಯನ್ನು ಏಕಕಾಲಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಅನಾವರಣ ಮಾಡಿಸಿದ್ದರು.

ಆ ಪೈಕಿ ಮೊದಲ ಚಿತ್ರವಾಗಿ ರಾಜ್ ಮೋಹನ್ ಅವರ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ (Darling Krishna) ಹಾಗೂ ಖ್ಯಾತ ನಟ ಪ್ರಕಾಶ್ ರೈ  (Prakash Raj)ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಫಾದರ್”  (Father) ಚಿತ್ರ ಆರಂಭವಾಗಿದ್ದು ಎಲ್ಲರಿಗೂ ತಿಳಿದ ಸಂಗತಿ. ಪ್ರಸ್ತುತ “ಫಾದರ್” ಚಿತ್ರಕ್ಕೆ  ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಬೆಂಗಳೂರು, ಆನೇಕಲ್, ಚನ್ನಪಟ್ಟಣ, ಮಂಗಳೂರು, ಧರ್ಮಸ್ಥಳ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.

ಬಾಕಿಯಿರುವ ಎರಡು ಹಾಡುಗಳ ಚಿತ್ರೀಕರಣವನ್ನು ಸದ್ಯದಲ್ಲೇ ಪೂರ್ಣಗೊಳಿಸಿ, ಆದಷ್ಟು ಬೇಗ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿರುವ ಆರ್ ಚಂದ್ರು, ಶೀಘ್ರದಲ್ಲೇ ಉಳಿದ ನಾಲ್ಕು ಚಿತ್ರಗಳಿಗೂ ಚಾಲನೆ ನೀಡುವುದಾಗಿ ಹೇಳಿದ್ದಾರೆ.

ವಿನೋದ್ ಮಾಸ್ಟರ್ ಸಾಹಸ ನಿರ್ದೇಶನ ಹಾಗೂ ಸುಜ್ಞಾನಮೂರ್ತಿ ಅವರ ಛಾಯಾಗ್ರಹಣ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.

Share This Article