ಬೀಜಿಂಗ್: ತಂದೆ ಕಾರ್ ಖರೀದಿಸದ ಹಿನ್ನೆಲೆಯಲ್ಲಿ ಪುತ್ರ ಜೈಲು ಸೇರಿರುವ ವಿಚಿತ್ರ ಘಟನೆ ಚೀನಾದ ಜಿಯಾಂಗ್ ನಗರದಲ್ಲಿ ನಡೆದಿದೆ.
ಜಿಯಾಂಗ್ ನಗರದ ಬಿಎಂಡಬ್ಲ್ಯೂ ಕಾರ್ ಶೋ ರೂಂನಲ್ಲಿ 22 ವರ್ಷದ ಯುವಕನೊಬ್ಬ ಕಾರನ್ನು ಗೀಚಿದ್ದಾನೆ. ಆದರೆ ತಂದೆ ಕಾರು ಖರೀದಿಸದೆ ಇರುವುದರಿಂದ ಶೋ ರೂಂ ವ್ಯವಸ್ಥಾಪಕರ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಯುವಕನ ಹೆಸರು ಜಿ ಮೌಬಿಂಗ್ ಎಂದು ಜಿಯಾಂಗ್ ನಗರದ ಪೊಲೀಸರು ತಿಳಿಸಿದ್ದಾರೆ. ಡ್ರೈವಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಗನಿಗೆ ಐಷಾರಾಮಿ ಕಾರು ಸಿಗುತ್ತದೆ ಎಂದು ತಂದೆ ಭರವಸೆ ನೀಡಿದ್ದರು. ಆದರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಒಂದು ವರ್ಷ ಕಳೆದರೂ ತಂದೆ ಕಾರು ಖರೀದಿಸಲಿಲ್ಲ. ಇದರ ಕೋಪಗೊಂಡ ಯುವಕ ಬಿಎಂಡಬ್ಲ್ಯೂ ಕಾರ್ ಶೋ ರೂಂಗೆ ಬಂದು ಕಾರಿನ ಮೇಲೆ ಗೀಚಿದ್ದಾನೆ.
ತಾನು ಗೀಚಿದ ಐಷಾರಾಮಿ ಕಾರು ತುಂಬಾ ಇಷ್ಟವಾಗಿದ್ದು, ಅದನ್ನು ಖರೀದಿಸಲು ಸ್ವಲ್ಪ ಹಣವನ್ನು ಕೂಡಿಸಿ ಇಟ್ಟಿದ್ದಾಗಿ ಜಿ ಮೌಬಿಂಗ್‍ಗೆ ಹೇಳಿಕೊಂಡಿದ್ದಾನೆ. ಘಟನೆಯ ದೃಶ್ಯವು ಶೋ ರೂಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೋ ರೂಂ ಮ್ಯಾನೇಜರ್ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಆದರೆ ತಂದೆ ಯುವಕನಿಗೆ ಕಾರು ಖರೀದಿಸಿದ್ದಾರೋ ಇಲ್ಲವೋ ಎಂಬುದು ತಿಳಿದು ಬಂದಿಲ್ಲ.