ಮಗಳ ಸಾವಿಗೆ ಪ್ರತೀಕಾರ – ‘ತಮ್ಮ’ನ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ

Public TV
2 Min Read

ಮಂಡ್ಯ: ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಿದ್ದ ಆರೋಪಿಯ ತಂದೆಯನ್ನು ಆಕೆಯ ತಂದೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ(Mandya) ಜಿಲ್ಲೆಯ ಪಾಂಡವಪುರ(Pandavapura) ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.

ಆರೋಪಿ ವೆಂಕಟೇಶ್‌

ಮಾಣಿಕ್ಯನಹಳ್ಳಿ(Manikyanahalli) ಗ್ರಾಮದ ನರಸಿಂಹೇಗೌಡ ಕೊಲೆ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಕೊಲೆ ಆರೋಪಿ. ಇದನ್ನೂ ಓದಿ: ಹುಬ್ಬಳ್ಳಿ-ವಿಜಯಪುರ ರಾ.ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ದುರ್ಮರಣ

ನರಸಿಂಹೇಗೌಡ ಅವರ ಪುತ್ರ ನಿತೀಶ್, ವೆಂಕಟೇಶ್ ಅವರ ಪುತ್ರಿ ದೀಪಿಕಾಳನ್ನು ಕೊಲೆ ಮಾಡಿದ್ದ. ಮಗಳ ಸಾವಿಗೆ ಪ್ರತೀಕಾರವಾಗಿ ಆಕೆಯ ತಂದೆ ವೆಂಕಟೇಶ್ ಆರೋಪಿ ನಿತೀಶ್‌ನ ತಂದೆಯನ್ನು ಹತ್ಯೆ ಮಾಡಿದ್ದಾನೆ. ಇದನ್ನೂ ಓದಿ:  ಅಭಿಮಾನಿ ಕಡೆ ಗನ್ ಇಟ್ಟ ದಳಪತಿ ವಿಜಯ್ ಬಾಡಿಗಾರ್ಡ್!

ಏನಿದು ಪ್ರಕರಣ?
ಟೀಚರ್ ದೀಪಿಕಾ ಮತ್ತು ನಿತೀಶ್ ಇಬ್ಬರು ಸ್ನೇಹ ಹಾಗೂ ಸಲುಗೆಯಿಂದಿದ್ದರು. ಇದನ್ನು ಗಮನಿಸಿದ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ದೀಪಿಕಾ ಬಳಿ ಪ್ರಶ್ನಿಸಿದಾಗ ಆತ ನನಗೆ ತಮ್ಮ ಇದ್ದಂತೆ ಎಂದು ಹೇಳಿದ್ದಳು. ಕುಟುಂಬಸ್ಥರ ಎಚ್ಚರಿಕೆಯ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಇದನ್ನೂ ಓದಿ: ದಿಢೀರ್‌ 35 ಸಾವಿರದಿಂದ 3 ಸಾವಿರ ಕ್ಯುಸೆಕ್‌ಗೆ ಇಳಿಕೆಯಾಯ್ತು ನೀರು – ಭಾರತದ ʼಜಲ ಬಾಂಬ್‌ʼಗೆ ಪಾಕ್‌ ತತ್ತರ

ದೀಪಿಕಾ ಜೊತೆ ಒಡನಾಟವಿಲ್ಲದೇ ನಿತೀಶ್ ಕೋಪಗೊಂಡಿದ್ದ. ಬಳಿಕ 2024 ಜ. 22ರಂದು ನಿತೀಶ್ ಬರ್ತ್ಡೇ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆಸಿಕೊಂಡಿದ್ದ. ದೀಪಿಕಾ ಆತನಿಗೆ ಶರ್ಟ್ ಗಿಫ್ಟ್ ಕೊಡಲು ಹೋಗಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿ, ಕೊಲೆಯಲ್ಲಿ ಅಂತ್ಯವಾಗಿತ್ತು. ಮಂಡ್ಯ ಪೊಲೀಸರು ಕೊಲೆ ಆರೋಪಿ ನಿತೀಶ್‌ನನ್ನು ಬಂಧಿಸಿದ್ದರು.

ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಹೊಂಚು ಹಾಕುತ್ತಿದ್ದ. ಇದೇ ಭಾನುವಾರ ಧರ್ಮಸ್ಥಳದಲ್ಲಿ ನಿತೀಶ್ ತಂಗಿ ಮದುವೆ ನಿಶ್ಚಯವಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ವೆಂಕಟೇಶ್ ನಿತೀಶ್ ತಂದೆ ನರಸಿಂಹೇಗೌಡರನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ವೇದಿಕೆಯಲ್ಲಿ ಸಮಂತಾ ಕಣ್ಣೀರಿಟ್ಟಿದ್ಯಾಕೆ?- ಪ್ರಚಾರದ ಗಿಮಿಕ್ ಎಂದವರಿಗೆ ನಟಿ ಸ್ಪಷ್ಟನೆ

ಕೊಲೆ ಮಾಡುವ ವೇಳೆ ನನ್ನ ಮಗಳನ್ನು ಕೊಲೆ ಮಾಡಿ ನಿನ್ನ ಮಗಳ ಮದುವೆ ಮಾಡ್ತಾ ಇದ್ದೀರಾ ಎಂದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಮೇಲುಕೋಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ(Melukote Police Station) ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಆರೋಪಿ ವೆಂಕಟೇಶ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article