ಗೋವುಗಳ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ದಾರುಣ ಸಾವು

Public TV
1 Min Read

ಚಿತ್ರದುರ್ಗ: ಗೋವುಗಳ ಗಂಜಲದ ಗುಂಡಿಗೆ ಬಿದ್ದು ತಂದೆ, ಮಗ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಡಿಕೆ ತೋಟದ ಕೆಲಸಕ್ಕಾಗಿ ಮಹಾಲಿಂಗಪ್ಪ ಎಂಬವರ ಜಮೀನಿಗೆ ಈ ಕಾರ್ಮಿಕರು ತೆರಳಿದ್ದರು. ಈ ವೇಳೆ ಆಳವಾದ ಗುಂಡಿಗೆ ಬಿದ್ದ ಮಹಾಲಿಂಗಪ್ಪ (50) ಹಾಗೂ ಅವರ ಪುತ್ರ ಪೃಥ್ವಿ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾರ್ ಪಕ್ಕದಲ್ಲೇ ಕುಡುಕರ ವಿಶ್ರಾಂತಿ ಭವನ ಮಾಡ್ಬೇಕು – ಮದ್ಯಪಾನ ಪ್ರಿಯರ ಸಂಘದ ಹೈಟೆಕ್‌ ಬೇಡಿಕೆಗಳೇನು?

ಗುರುವಾರ ಮಧ್ಯಾಹ್ನ ಮಹಾಲಿಂಗಪ್ಪ ಆಕಸ್ಮಿಕವಾಗಿ ಗುಂಡಿಗೆ ಬಿದ್ದಿದ್ದಾರೆ. ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಅಪ್ಪನನ್ನು ರಕ್ಷಣೆ ಮಾಡಲು ಮಗ ಪೃಥ್ವಿ ಕೂಡಾ ಗುಂಡಿಗೆ ಇಳಿದಿದ್ದಾನೆ. ಆದರೆ ಗುಂಡಿಯಿಂದ ಹೊರಬರಲಾರದೆ ಇಬ್ಬರೂ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಮೃತದೇಹಗಳಿದ್ದ ಹಿರಿಯೂರಿನ ಸರ್ಕಾರ ಆಸ್ಪತ್ರೆಯ ಶವಾಗಾರಕ್ಕೆ ತಹಶೀಲ್ದಾರ್ ರಾಜೇಶ್‍ಕುಮಾರ್ ಭೇಟಿ ನೀಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರತಾಪ್‌ಸಿಂಹನಂಥ ರಾಷ್ಟ್ರಭಕ್ತ, ಹಿಂದುತ್ವವಾದಿಯನ್ನು ಯಾರೂ ಖಂಡಿಸಲು ಸಾಧ್ಯವಿಲ್ಲ: ಈಶ್ವರಪ್ಪ

Share This Article