ಹಾಸನಾಂಬೆ ದೇವಿ ದರ್ಶನ ಮುಗಿಸಿ ಹಿಂತಿರುಗುವ ವೇಳೆ ಕಾರು ಡಿಕ್ಕಿ- ತಂದೆ, ಮಗಳು ಸಾವು

Public TV
1 Min Read

ಹಾಸನ: ಹಾಸನಾಂಬೆ (Hasanamba) ದೇವಿ ದರ್ಶನ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಒಂದೇ ಕುಟುಂಬದ ಮೂವರಿಗೆ ಕಾರು ಡಿಕ್ಕಿಯಾಗಿದೆ. ಘಟನೆಯಲ್ಲಿ ತಂದೆ, ಮಗಳು ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಗಂಭೀರವಾಗಿದೆ. ಹಾಸನ (Hasana) ನಗರದ ತಣ್ಣೀರಹಳ್ಳ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಕುಮಾರ್(38), ಕಾವ್ಯ(12) ಮೃತ ದುರ್ದೈವಿಗಳು. ಗುರುವಾರ ರಾತ್ರಿ ಪತ್ನಿ ಪುಟ್ಟಮ್ಮ, ಮಗಳು ಕಾವ್ಯ ಜೊತೆ ಕುಮಾರ್ ಹಾಸನಾಂಬೆ ದೇವಿ ದರ್ಶನಕ್ಕೆ ಹೋಗಿದ್ದರು. ದೇವಿ ದರ್ಶನ ಪಡೆದು ವಿಜಯನಗರದಲ್ಲಿರುವ (Vijayanagara) ಸಂಬಂಧಿಕರ ಮನೆಗೆ ಮೂವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರೊಂದು ಮೂವರಿಗೂ ಡಿಕ್ಕಿ ಹೊಡೆದಿದೆ. ಕುಮಾರ್ ಹಾಗೂ ಕಾವ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಪುಟ್ಟಮ್ಮನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದನ್ನೂ ಓದಿ: ಬೆಳಗಾವಿಗೂ ಕಾಲಿಟ್ಟ ವಕ್ಫ್ ಆಸ್ತಿ ವಿವಾದ – 30 ರೈತರ ಪಹಣಿಯಲ್ಲಿ ವಕ್ಫ್ ಹೆಸರು ನಮೂದು!

ಫೋಟೋಗ್ರಾಫರ್ ಶಶಾಂಕ್ ಅಪಘಾತ ಮಾಡಿದ ಕಾರು ಚಾಲಕ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯದ ಜನತೆಗೆ ಕನ್ನಡದಲ್ಲೇ ರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ

Share This Article