ಮಾಜಿ ಪ್ರಿಯಕರನಿಂದ ನಟಿ ಮೇಲೆ ಮಾರಣಾಂತಿಕ ಹಲ್ಲೆ: ಫೋಟೋ ಶೇರ್ ಮಾಡಿದ ಅನಿಕಾ

Public TV
1 Min Read

ಟಿ ಅನಿಕಾ ವಿಜಯ್ ವಿಕ್ರಮನ್ (Anika Vijay Vikraman) ಮೇಲೆ ಮಾಜಿ ಪ್ರಿಯಕರ ಅನೂಪ್ ಪಿಳ್ಳೈ (Anoop Pillai) ಮಾರಣಾಂತಿಕ ಹಲ್ಲೆ (Assault) ಮಾಡಿದ್ದಾರೆ. ಮುಖ, ಕಣ್ಣುಗಳಿಗೆ ಗುದ್ದಿ ಗಾಯಗೊಳಿಸಿದ್ದಾನೆ. ರಕ್ತಸಿಕ್ತ ಮುಖದ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕ್ರೂರ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದಾರೆ. ಅನುಭವಿಸಿದ ಯಾತನೆಯನ್ನು ಇಂಚಿಂಚಾಗಿ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಕ್ರೂರವಾಗಿ ಥಳಿಸಿರುವ ಮಾಜಿ ಪ್ರಿಯಕರನ ಬಗ್ಗೆ ಬರೆದುಕೊಂಡಿದ್ದು, ‘ನಾನು ಅವನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವನು ಹಲವು ತಿಂಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ತೊಂದರೆ ಕೊಡುತ್ತಲೇ ಬಂದ. ಈಗಾಗಲೇ ಎರಡು ಬಾರಿ ಥಳಿಸಿದ್ದಾನೆ. ಜೀವ ಬೆದರಿಕೆ ಹಾಕಿದ್ದಾನೆ. ನನ್ನ ಜೀವನದಲ್ಲಿ ಇಂಥದ್ದೊಂದು ಘಟನೆ ನಡೆಯುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ. ಪೊಲೀಸರು ಕೂಡ ಅವನಿಗೆ ಸಹಕರಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ಹಂಚಿಕೊಂಡ ಜಾನ್ವಿ ಕಪೂರ್

ಈ ಕುರಿತು ಬೆಂಗಳೂರು (Bangalore) ಪೊಲೀಸರಿಗೆ ದೂರು (Complaint)  ನೀಡಿರುವ ಅವರು, ‘ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಅವನಿಂದ ದೂರ ಇರು ಎಂದು ನನಗೆ ಸಲಹೆ ನೀಡಿದರು. ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ. ಹಾಗಾಗಿ ಮತ್ತೆ ಮತ್ತೆ ಅವನು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾನೆ’ ಎಂದು ಬೆಂಗಳೂರು ಪೊಲೀಸರ ಮೇಲೂ ಅನಿಕಾ ದೂರಿದ್ದಾರೆ. ಈ ಅನಿಕಾ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಪ್ರಿಯಕರನ ವಿರುದ್ಧದ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ.

ಅವನಿಂದ ಮೋಸವಾಗುತ್ತಿದೆ ಎಂದು ಗೊತ್ತಾದಾಗ ಪ್ರಿಯಕರನಿಂದ ದೂರವಾದರಂತೆ ಅನಿಕಾ. ಆದರೂ, ಅವನು ಮಾತ್ರ ದೂರವಾಗಲಿಲ್ಲವಂತೆ. ಅನುಮಾನ ಪಡುವುದು, ವಾಟ್ಸಪ್ ಪರಿಶೀಲಿಸುವುದು, ಅನುಮಾನ ಪಡುವ ರೀತಿಯಲ್ಲಿ ಪ್ರಶ್ನೆ ಮಾಡುವುದು ಹೀಗೆ ನಿರಂತರವಾಗಿ ಕಿರುಕುಳ ಕೊಡುತ್ತಾ ಬಂದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *