ರಿಯಲ್ ಎಸ್ಟೇಟ್ ಬ್ರೋಕರ್ ಮೇಲೆ ‘ಕೈ’ ಕಾರ್ಪೋರೇಟರ್ ಸಹೋದರನಿಂದ ಮಾರಣಾಂತಿಕ ಹಲ್ಲೆ

By
1 Min Read

ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಬ್ರೋಕರ್ ಮೇಲೆ ಕಾಂಗ್ರೆಸ್ ಕಾರ್ಪೋರೇಟರ್ ಸಹೋದರ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹೆಣ್ಣು ಮಕ್ಕಳು ಅಂತ ನೋಡದೆ ನಾಲ್ಕೈದು ರೌಡಿಗಳ ಜೊತೆ ಸೇರಿಕೊಂಡು ಮನಬಂದಂತೆ ಥಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಈ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಅವರೇ ನಿಮ್ಮ ಸರ್ಕಾರದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ವಾ. ಕಾಂಗ್ರೆಸ್ (Congres) ಅಧಿಕಾರದಲ್ಲಿದೆ ಅಂದರೆ ನಿಮ್ಮ ಸ್ಥಳೀಯ ಮುಖಂಡರು ಏನು ಮಾಡಿದ್ರು ನಡೆಯುತ್ತಾ ಅಂತ ಹುಬ್ಬಳ್ಳಿ ಜನ ಪ್ರಶ್ನೆ ಮಾಡುವಂತಾಗಿದೆ.

ಹುಬ್ಬಳ್ಳಿ ಬಿಡ್ನಾಳದಲ್ಲಿ ಈ ಪ್ರಕರಣ ನಡೆದಿದ್ದು, ರಿಯಲ್ ಎಸ್ಟೇಟ್ ಬ್ರೋಕರ್ ಗುರುಸಿದ್ದಪ್ಪ ಮತ್ತು ಕುಟುಂಬಸ್ಥರ ಮೇಲೆ ರೌಡಿ ಶೀಟರ್ ಶಿವರಾಜ್ ಗೌರಿ ಮತ್ತು ಸಹಚರರಿಂದ ಕೃತ್ಯ ನಡೆದಿದೆ. ಆರೋಪಿ ಶಿವರಾಜ್ ಗೌರಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಾಗರಾಜ್ ಗೌರಿ ಸಹೋದರನಾಗಿದ್ದಾನೆ.  ಇದನ್ನೂ ಓದಿ: ನಿಗಮ ಮಂಡಳಿ ನೇಮಕಾತಿ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಕೇಳಲು ಕಷ್ಟ: ಸಿದ್ದರಾಮಯ್ಯ

ಹಣಕಾಸಿನ ಮಾತುಕತೆಗೆಂದು ಗುರುಸಿದ್ದಪ್ಪನನ್ನು ತುಷಾರ್ ಎಂಬವರ ಆಫೀಸ್‍ಗೆ ಆರೋಪಿ ಶಿವರಾಜ್ ಕರೆಸಿದ್ದರು. ಈ ವೇಳೆ ಏಕಾಏಕಿ ಗುರುಸಿದ್ದಪ್ಪ ಮೇಲೆ ಹಲ್ಲೆ ನಡೆಸಿದ ಶಿವರಾಜ್ ಗೌರಿ, ನಾನು ಕಾಂಗ್ರೆಸ್ ಲೀಡರ್, ಕಾಂಗ್ರೆಸ್ ಕಾರ್ಪೊರೇಟರ್ ತಮ್ಮ ಅಂತ ದರ್ಪ ತೋರಿದ್ದಾರೆ ಎನ್ನಲಾಗಿದೆ.

ಗುರುಸಿದ್ದಪ್ಪರನ್ನು ಬಿಡಸಲು ಬಂದ ಪತ್ನಿ ಮತ್ತು ಮಕ್ಕಳ ಮೇಲೂ ಹಲ್ಲೆ ನಡೆಸಿ, ಅವರ ಮಗಳು ಅನ್ನಪೂರ್ಣ ಬಟ್ಟೆ ಹರಿದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ರೌಡಿ ಶೀಟರ್ ಶಿವರಾಜ್, ತುಷಾರ್, ಅಜರುದ್ದೀನ್ ಎಂಬವರ ಮೇಲೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Share This Article