ಸೆಕೆಗಾಲದಲ್ಲಿ ಮಿಕ್ಸ್ ಮ್ಯಾಚ್ ಟ್ರೆಂಡಿ ಹೈರ್ ಸ್ಟೈಲ್

Public TV
2 Min Read

ಎಂದಿನಂತೆ ಈ ಬಾರಿ ಸಮ್ಮರ್ ಸೀಸನ್‌ನಲ್ಲಿ (Summer Fashion) ಸೆಕೆಯಾಗದಂತೆ 3 ಬಗೆಯ ಸಮ್ಮರ್ ಮಿಕ್ಸ್ ಮ್ಯಾಚ್ ಹೇರ್‌ಸ್ಟೈಲ್‌ಗಳು ಟ್ರೆಂಡಿಯಾಗಿವೆ. ತಕ್ಷಣಕ್ಕೆ ನೋಡಲು ಹಳೆಯ ಹೇರ್ ಸ್ಟೈಲ್ (Hair Styles) ಎಂದೆನಿಸಿದರೂ ಅವುಗಳ ಜೊತೆಗೆ ನಾನಾ ಬಗೆಯ ವಿನ್ಯಾಸಗಳು ಸೇರಿಕೊಂಡಿವೆ.

ಸಮ್ಮರ್‌ನಲ್ಲಿ ಫ್ರೀ ಹೇರ್ ಸ್ಟೈಲ್‌ಗಳು ಸೈಡಿಗೆ ಸರಿದಿವೆ. ಕೇವಲ ಹೇರ್ ಕಂಡೀಷನ್ ಕೋಣೆಗಳಲ್ಲಿ ಹಾಗೂ ಇನ್‌ಡೋರ್ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಈ ಹೇರ್ ಸ್ಟೈಲ್‌ಗಳಲ್ಲಿ ಹೆಣ್ಣು ಮಕ್ಕಳು ಕಾಣಲು ಸಿಗುತ್ತಿದ್ದಾರೆ. ಇನ್ನು ಹೊರಾಂಗಣದಲ್ಲಿ ಸೆಕೆಯಾಗದ ಹಾಗೂ ಆರಾಮ ಎಂದೆನಿಸುವ ಕಂಫರ್ಟಬಲ್ ಕೂದಲ ವಿನ್ಯಾಸಗಳು ಚಾಲ್ತಿಯಲ್ಲಿವೆ. ಇದು ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಟೀನೇಜ್ ಹಾಗೂ ಯುವತಿಯರಲ್ಲೂ ಕಾಮನ್ ಆಗಿವೆ.

ನೆತ್ತಿಯ ಮೇಲೆ ಹಾಕುವಂತಹ ಹೈ ಬನ್ ಹೇರ್‌ ಸ್ಟೈಲ್‌ಗಳು ಇದೀಗ ಬಿಸಿಲಿನ ಝಳದಲ್ಲಿ ಹೈಲೈಟ್ ಆಗುತ್ತಿವೆ. ಕೆಳಗಿನಿಂದ ಮೇಲಿನವರೆಗೂ ಕೂದಲನ್ನು ಕಟ್ಟಿ ಹಾಕುವಂತಹ ವಿನ್ಯಾಸದಲ್ಲಿ ಹಾಗೂ ನೆತ್ತಿಯ ಮೇಲೆ ಸುತ್ತಿ ಅಥವಾ ಹರಡಿದಂತೆ ಕಾಣುವ ರೀತಿಯಲ್ಲಿ ಹಾಕುವ ಹೇರ್‌ಬನ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇವು ನೋಡಲು ಕೂಡ ಆಕರ್ಷಕವಾಗಿ ಕಾಣಿಸುತ್ತವೆ. ಜೊತೆಗೆ ಸೆಕೆಯಾಗುವುದಿಲ್ಲ.

ಮುಂಭಾಗದಲ್ಲಿ ಹುಡುಗಿಯರ ಹಣೆಯನ್ನು ಕವರ್ ಮಾಡುವ ಫ್ರಿಂಝ್ ಹೇರ್ ಸ್ಟೈಲ್ ಹಿಂದೆ ಸಿಂಪಲ್ ಪೋನಿಟೈಲ್ ಕೂಡ ಈ ಸೀಸನ್‌ನಲ್ಲಿ ಮರಳಿದೆ. ನೋಡಲು ಸಿಂಪಲ್ಲಾಗಿ ಕಾಣಿಸುವ ಈ ಹೇರ್ ಸ್ಟೈಲ್ ನೋಡಿದಾಗ ಖಾಲಿ ಎಂದೆನಿಸುವುದಿಲ್ಲ. ಬದಲಿಗೆ ಎರಡು ಹೇರ್ ಸ್ಟೈಲ್ ಕಾಂಬಿನೇಷನ್ ಇದಾಗಿರುತ್ತದೆ. ಅರ್ಧ ಫ್ರೀ ಹೇರ್ ಸ್ಟೈಲ್ ಹಾಗೂ ಅರ್ಧ ಕಟ್ಟಿದ ಬನ್ ಹೇರ್ ಸ್ಟೈಲ್ ಕಾಂಬೀನೇಷನ್ ಈ ಸೀಸನ್‌ನ ಹನ್ ಹೇರ್ ಸ್ಟೈಲಿನಲ್ಲಿ ಸೇರಿದೆ. ಇವೆರಡರೊಳಗೆ ಹಣೆ ಮುಂಭಾಗದ ಫಿಂಝ್ ಹೇರ್ ಸ್ಟೈಲ್ ಮಿಕ್ಸ್ ಆಗಿದೆ. ಇವೆಲ್ಲದರ ಸಮಾಗಮ ಫ್ರಿಂಝ್ ಹನ್ ಹೇರ್ ಸ್ಟೈಲ್. ಇದು ಈ ಸೀಸನ್‌ನಲ್ಲಿ ಇದು ಹುಡುಗಿಯರ ಫೇವರೇಟ್ ಲಿಸ್ಟ್‌ನಲ್ಲಿದೆ.

ಹೇರ್ ಸ್ಟೈಲಿಂಗ್‌ ಪ್ರಿಯರಿಗೆ ಸಿಂಪಲ್ ಟಿಪ್ಸ್:
* ಹೊರಗಡೆ ಹೋಗುವಾಗ ಮೇಲಿನ ಹೇರ್‌ಸ್ಟೈಲ್‌ಗಳನ್ನು ಮಾಡಿ.
* ಮುಖದ ಆಕಾರಕ್ಕೆ ತಕ್ಕಂತೆ ಇವನ್ನು ಆಯ್ಕೆ ಮಾಡಿ.
* ಫ್ರಿಂಝ್ ಮಾಡದಿದ್ದವರೂ ಸೈಡ್‌ಲಾಕ್ಸ್ ಕೂದಲ ವಿನ್ಯಾಸ ಮಾಡಬಹುದು.
* ತೀರಾ ಟೈಟಾಗಿ ಕಟ್ಟಬೇಡಿ. ತಲೆ ನೋವಾಗಬಹುದು.
* ಮೇಲಿನ ಹೇರ್‌ಸ್ಟೈಲ್ಸ್ ನಿಮಗೆ ಸ್ಲಿಮ್ ಲುಕ್ ನೀಡಬಹುದು.

Share This Article