ರೈತರು ಸ್ಮಾರ್ಟ್‍ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ

Public TV
1 Min Read

ಗಾಂಧಿನಗರ: ರೈತರು ಸ್ಮಾಟ್‌ಪೋನ್‌ ಖರೀದಿಸಲು ಗುಜರಾತ್ ಸರ್ಕಾರ 1500 ಆರ್ಥಿಕ ನೆರವು ಕೊಡುವ ಮೂಲಕವಾಗಿ ಸುದ್ದಿಯಾಗಿದೆ.

ರಾಜ್ಯದಲ್ಲಿನ ರೈತರು ಸ್ಮಾಟ್‌ಪೋನ್‍ವೊಂದನ್ನು ಖರೀದಿಸಲು ಗುಜರಾತ್ ಸರ್ಕಾರವು 1,500ವರೆಗಿನ ಆರ್ಥಿಕ ನೆರವು ಕಲ್ಪಿಸಲು ನಿರ್ಧರಿಸಿದೆ ಎಂದು ರಾಜ್ಯದ ಕೃಷಿ ಇಲಾಖೆಯು ಹೊರಡಿಸಿದ ಅಧಿಸೂಚನೆಯೊಂದು ಹೇಳಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಸೇವೆಗಳ ಪ್ರಭುತ್ವ ಬೆಳೆಯುತ್ತಿರುವ ಈ ಸಮಯದಲ್ಲಿ ತಮ್ಮ ಕೃಷಿ ಆದಾಯವನ್ನು ಹೆಚ್ಚಿಸಲು ವಿವಿಧ ಉದ್ದೇಶಗಳ ಬಳಕೆಗೆ ಸ್ಮಾಟ್‌ಪೋನ್‌ ಖರೀದಿಸುವಂತೆ ರೈತರನ್ನು ಉತ್ತೇಜಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಗುಜರಾತ್‍ನಲ್ಲಿ ಭೂಮಿಯನ್ನು ಹೊಂದಿರುವ ಯಾವುದೇ ರೈತರು ಈ ಯೋಜನೆಯ ಪ್ರಯೋಜನ ಪಡೆಯಲು  ಸ್ಮಾಟ್‌ಪೋನ್‌ ಒಟ್ಟು ಮೊತ್ತದ ಶೇ 10 ಭಾಗ ಅಂದರೆ 1,500 ರೂಪಾಯಿ ಸಹಾಯ ಪಡೆಯಲು ಐ-ಖೆದುತ್ ಪೆÇೀರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ರಾಜ್ಯ ಕೃಷಿ, ರೈತರ ಕಲ್ಯಾಣ ಮತ್ತು ಸಹಕಾರ ಇಲಾಖೆ ಶನಿವಾರ ಹೊರಡಿಸಿದ ಸರ್ಕಾರದ ನಿರ್ಣಯ (ಜಿಆರ್) ತಿಳಿಸಿದೆ.

MONEY

ಈ ಆರ್ಥಿಕ ನೆರವು ಸ್ಮಾಟ್‌ಪೋನ್‌ ಖರೀದಿಸಲು ಮಾತ್ರ ಸಂಬಂಧಿಸಿದೆ. ಚಾರ್ಜರ್, ಇಯರ್ ಫೋನ್ ಮೊದಲಾದ ಬಿಡಿಭಾಗಗಳಿಗಾಗಿ ಅರ್ಜಿ ಸಲ್ಲಿಸುವಂತಿಲ್ಲ ಎಂದು ಪ್ರಕಟಣೆ ಹೇಳಿದೆ. ಅರ್ಜಿಯನ್ನು ಅನುಮೋದಿಸಿದ ನಂತರ, ಫಲಾನುಭವಿ ರೈತರು ಸ್ಮಾಟ್‌ಪೋನ್‌ ಖರೀದಿ ಬಿಲ್‍ನ ಪ್ರತಿ, ಮೊಬೈಲ್ ಐಎಂಇಐ ಸಂಖ್ಯೆ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ ಎಂದು ಪ್ರಕಟಣೆ ಮಾಹಿತಿ ನೀಡಿದೆ.

 

Share This Article
Leave a Comment

Leave a Reply

Your email address will not be published. Required fields are marked *