ರೈತರ ಪ್ರತಿಭಟನೆ- 1ಕಿ.ಮೀ ಸಾಗಲು ಬರೋಬ್ಬರಿ ಒಂದು ಗಂಟೆ ಕಾದ ವಾಹನಗಳು

Public TV
2 Min Read

– ದೆಹಲಿಯಲ್ಲಿ ಬಿಗಿ ಬಂದೋಬಸ್ತ್

ನವದೆಹಲಿ: ರೈತರ ಪ್ರತಿಭಟನೆ (Protest)  ನಡೆಯುತ್ತಿರುವ ಹಿನ್ನೆಲೆ ಗಾಜಿಪುರ  ಮತ್ತು ಚಿಲ್ಲಾ ಗಡಿಯ ಹೆದ್ದಾರಿಗಳಲ್ಲಿ (Highway) ತೀವ್ರ ಟ್ರಾಫಿಕ್ ಉಂಟಾಗಿದ್ದು, ವಾಹನ ಸವಾರರು ಗಂಟೆಗಳ ಕಾಲ ಕಾಯುವಂತಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ರೈತರ ಮೆರವಣಿಗೆಗೆ ಮೊದಲೇ ದೆಹಲಿಯ ಬಹುಮುಖ್ಯ ರಸ್ತೆಗಳಿಗೆ ಸಂರ್ಪಕಿಸುವ ಹೆದ್ದಾರಿಗಳಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ. ಇದರಿಂದ ವಾಹನ ಸವಾರರು ಒಂದು ಕಿಲೋಮೀಟರ್‌ಗೆ ಒಂದು ಗಂಟೆ ಕಾಯುವಂತಾಗಿದೆ. ದೆಹಲಿಯ ಗಾಜಿಯಾಬಾದ್ (Ghaziabad) ಮತ್ತು ಉತ್ತರ ಪ್ರದೇಶದ ನೋಯ್ಡಾದೊಂದಿಗೆ (Noida) ಸಂಪರ್ಕಿಸುವ ಗಾಜಿಪುರ ಮತ್ತು ಚಿಲ್ಲಾ ಗಡಿ ಹೆದ್ದಾರಿಯಲ್ಲಿ ತೀವ್ರ ಟ್ರಾಫಿಕ್ ಉಂಟಾಗಿದೆ. ಇದನ್ನೂ ಓದಿ: ಪ್ರಧಾನಿ, ಗೃಹ ಸಚಿವರ ನಿವಾಸದ ಮುಂದೆ ರೈತರ ದೀಢಿರ್ ಪ್ರತಿಭಟನೆ ಸಾಧ್ಯತೆ

ದೆಹಲಿಯಿಂದ ಗುರುಗಾಂವ್‌ಗೆ ಸಂಪರ್ಕಿಸುವ ಎನ್‌ಹೆಚ್- 48 ರಸ್ತೆಯಲ್ಲಿಯೂ ವಾಹನಗಳ ಸಂಚಾರ ನಿಧಾನವಾಗಿದೆ. ದೆಹಲಿಗೆ ಪ್ರವೇಶಿಸುವ ಮೊದಲು ಬರುವ ಎಲ್ಲ ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಪ್ರತಿಭಟನೆ ಮಾಡುತ್ತಿರುವ ರೈತರನ್ನು ದೆಹಲಿಗೆ ಪ್ರವೇಶಿಸಿದಂತೆ ತಡೆಯಲು ಗಾಜಿಪುರ, ಸಿಂಘು ಮತ್ತು ಟಿಕ್ರಿ ಸೇರಿದಂತೆ ಹಲವಾರು ಗಡಿ ಭಾಗಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇದನ್ನೂ ಓದಿ: ಮೈದಾನವನ್ನು ಜೈಲಾಗಿಸಲು ಅನುಮತಿ ನೀಡಲ್ಲ – ರೈತರ ಹೋರಾಟಕ್ಕೆ ದೆಹಲಿ ಸರ್ಕಾರದ ಬೆಂಬಲ

ಟ್ರಾಕ್ಟರ್‌ಗಳು ಮತ್ತು ಟ್ರಾಲಿಗಳು ಗಡಿ ಭಾಗದಲ್ಲಿ ಉರುಳುವುದನ್ನು ತಡೆಯಲು ಕಾಂಕ್ರೀಟ್ ಬ್ಲಾಕ್‌ಗಳು ಮತ್ತು ಬ್ಯಾರಿಕೇಡ್‌ಗಳ ಪದರಗಳನ್ನು ಹೆದ್ದಾರಿಗಳಲ್ಲಿ ನಿರ್ಮಿಸಲಾಗಿದೆ. ರಸ್ತೆಗಳಲ್ಲಿ ಮುಳ್ಳು ತಂತಿ ಮತ್ತು ಮೊಳೆಗಳನ್ನೂ ಅಳವಡಿಸಲಾಗಿದೆ. ರೈತರು ಸೋಮವಾರ ರಾತ್ರಿ ಸರ್ಕಾರದ ನಿಯೋಗದೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರವೂ ಮೂರು ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಕನಿಷ್ಠ ಬೆಂಬಲ ಬೆಲೆಯನ್ನು ತಾವು ಬೆಳೆಯುವ ಬೆಲೆಗಳಿಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ದೆಹಲಿಯ ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 1 ಸ್ಥಾನ- AAP ಪ್ರಸ್ತಾಪ

ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸವೇ ಮೂಲಕ ದೆಹಲಿಗೆ ಸರಕು ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹರಿಯಾಣದ ಸಿರ್ಸಾ ಮತ್ತು ಉತ್ತರ ಪ್ರದೇಶದ ಸೂರಜ್‌ಪುರ (ಪರಿಚೌಕ್) ಮೂಲಕ ಪ್ರಯಾಣಿಸಲು ಸಹ ಅನುಮತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಚಲೋ ರೈತರ ಮೇಲೆ ಅಶ್ರುವಾಯು ಪ್ರಯೋಗ – ಹಲವರು ವಶಕ್ಕೆ

Share This Article