ಬೆಲೆ ನಿಗದಿ ಪಡಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ 100ಕ್ಕೂ ಅಧಿಕ ರೈತರು ವಶಕ್ಕೆ

Public TV
3 Min Read

ಬೆಳಗಾವಿ: ರೈತರು (Farmers) ಬೆಳೆದ ಪ್ರತಿ ಟನ್ ಕಬ್ಬಿಗೆ (Sugarcane) 5,500 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಸುವರ್ಣಸೌಧಕ್ಕೆ (Suvarna Soudha) ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು (Police) ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರತಿ ಟನ್ ಕಬ್ಬಿಗೆ 5,500 ರೂ. ಬೆಲೆ ನಿಗದಿ ಮಾಡುವಂತೆ ಒತ್ತಾಯಿಸಿ ಇಂದು ಬೆಳಗಾವಿ ಜಿಲ್ಲೆಯ ತಾಲೂಕಿನ ಹಲಗಾ ಬಳಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಖಂಡರು ಕರೆ ಕೊಟ್ಟಿದ್ದರು. ಆದ್ರೆ, ರೈತ ಹೋರಾಟಕ್ಕೆ ಬರುತ್ತಿದ್ದ ರೈತರನ್ನು ಪೊಲೀಸರು ರಸ್ತೆ ಮಧ್ಯದಲ್ಲಿಯೇ ತಡೆಯುತ್ತಿದ್ದು, ರೈತರ ಹೋರಾಟವನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸಲಿಂಗಿಯ ಕಾಟದಿಂದ ಬೇಸತ್ತ ಯುವಕ ಆತ್ಮಹತ್ಯೆಗೆ ಶರಣು

ಗ್ರಾಮೀಣ ಪ್ರದೇಶದಿಂದ ಬೆಳಗಾವಿ ನಗರಕ್ಕೆ ಹೋರಾಟಕ್ಕೆ ಬರುತ್ತಿದ್ದ ರೈತರು ಬೆಳಗಾವಿ ನಗರ ಪ್ರವೇಶಿಸದಂತೆ ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್‍ನಲ್ಲಿ ರೈತರನ್ನು ಪೊಲೀಸರು ತಡೆಯುತ್ತಿದ್ದಾರೆ. ರೈತ ಮುಖಂಡರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ರವಿ ಸಿದ್ದನ್ನವರ ನೇತೃತ್ವದಲ್ಲಿ ಯಮಕನಮರಡಿ ಬಳಿಯ ಹತ್ತರಗಿ ಟೋಲ್ ನಾಕಾ ಹಾಗೂ ರೈತ ಮುಖಂಡರಾದ ರಾಘವೇಂದ್ರ ನಾಯಕ, ಗಣಪತಿ ಇಳಿಗೆರ, ಶಿವಾನಂದ ಮುಗಳಿಹಾಳ ನೇತೃತ್ವದಲ್ಲಿ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 10ಕ್ಕೂ ಅಧಿಕ ರೈತರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೇ ನೇಸರಗಿ ಬಳಿಯೂ 50ಕ್ಕೂ ಅಧಿಕ ಹಾಗೂ ಯಮಕನಮರಡಿ ಬಳಿಯ 100ಕ್ಕೂ ಅಧಿಕ ರೈತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯೇ ಬೆಳಗಾವಿ ಡಿಸಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿ ಮಾಡುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಸಿಎಂ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಹೇಳಿತ್ತು. ಆದ್ರೆ, ಬೆಂಗಳೂರಿನಲ್ಲಿ ಸಕ್ಕರೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ (Shankar Patil Munenakoppa) ನೇತೃತ್ವದಲ್ಲಿ ರೈತರು ಮುಖಂಡರ ಸಭೆ ಜರುಗಿತು. ಆದರೆ, ಸಭೆಯಲ್ಲಿ ಸಚಿವರ ಭರವಸೆ ತೃಪ್ತಿ ತರದ ಹಿನ್ನೆಲೆಯಲ್ಲಿ ಇಂದು ರೈತರು ಪ್ರತಿಭಟನೆಗೆ ಮುಂದಾಗಿದ್ರು. ಇದನ್ನೂ ಓದಿ: ಬಾಬುರಾಯನ ಕೊಪ್ಪಲಿನ ಜೈ ಭುವನೇಶ್ವರಿ ಹೊಟೇಲ್ ಅಪ್ಪು ಫೇವರೆಟ್

ಈ ವೇಳೆ ಮಾತನಾಡಿದ ರೈತ ಮುಖಂಡ ಚುನ್ನಪ್ಪ ಪೂಜೇರಿ, ಕಿತ್ತೂರ ಉತ್ಸವಕ್ಕೆ ತಾಖತ್ ಇದ್ದರೆ ಬನ್ನಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸವಾಲ್ ಹಾಕಿದರು. ಕಬ್ಬಿನ ಬೆಲೆ 5,500 ರೂ. ನಿಗದಿ ಮಾಡದೇ ಇದ್ದರೆ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಬೊಮ್ಮಾಯಿ ಹೋದ ಕಡೆಯಲ್ಲಿ ನಮ್ಮ ರೈತರು ರಿಪೇರಿ ಮಾಡುತ್ತಾರೆ. ಕಾರ್ಖಾನೆಗಳಿಂದ 27,000 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ಬರುತ್ತದೆ. ಪ್ರತಿಟನ್‍ಗೆ 4,000 ರೂ.ಗಳ ತೆರಿಗೆ ಬರುತ್ತದೆ. ಈ ತೆರಿಗೆಯಲ್ಲಿ 2,000 ತೆಗೆದು ರೈತರಿಗೆ ಕೊಡಬೇಕು. ಈಗ ಇರುವ 3,500ಗೆ 2000 ಸೇರಿಸಿ 5,500 ರೂ.ಪ್ರತಿ ಟನ್‍ಗೆ ದರ ನಿಗದಿ ಮಾಡಿ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಸಿಎಂಗೆ ಸವಾಲ್ ಹಾಕಿದರು. ಒಂದು ವೇಳೆ ಕಬ್ಬಿನ ದರ ನಿಗದಿ ಮಾಡದೇ ಇದ್ದರೆ ಕಿತ್ತೂರ ಉತ್ಸವಕ್ಕೆ ಬಂದು ತೋರಿಸಿ. ಸುವರ್ಣ ಸೌಧ, ಕಿತ್ತೂರು ಉತ್ಸವ ಎಲ್ಲಕಡೆಯೂ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮುಂಜಾಗ್ರತಾ ಕ್ರಮವಾಗಿ ಹತ್ತರಗಿ ಟೋಲ್ ನಾಕಾ ಬಳಿ ಬೆಳಗಾವಿ ಎಸ್‍ಪಿ ಡಾ.ಸಂಜೀವ್ ಪಾಟೀಲ್ ಹಾಗೂ ಸುವರ್ಣ ಸೌಧ ಮುಂಭಾಗದಲ್ಲಿ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *