– ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ಕೊಟ್ಟ ಅನ್ನದಾತರು
ಚಿತ್ರದುರ್ಗ: ಇತ್ತೀಚಿಗೆ ಸುರಿದ ಅಕಾಲಿಕ ಮಳೆ ಹಾಗು ಬೆಲೆ ಕುಸಿತದಿಂದಾಗಿ ಈರುಳ್ಳಿಯನ್ನು (Onion) ಕೇಳುವವರಿಲ್ಲದಂತಾಗಿದೆ. ಹೀಗಾಗಿ ಆಕ್ರೋಶಗೊಂಡ ರೈತರು (Farmers) ಈರುಳ್ಳಿಯನ್ನು ಡಿಸಿ ಕಚೇರಿ ಆವರಣದಲ್ಲಿ ಸುರಿದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಹೌದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಸೇರಿದಂತೆ ಹಿರಿಯೂರು ತಾಲೂಕುಗಳ ರೈತರ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಹೀಗಾಗಿ ಈ ಭಾಗದ ಈರುಳ್ಳಿಗೆ ಎಲ್ಲಡೆ ಭಾರೀ ಬೇಡಿಕೆ ಇದೆ. ಅಲ್ಲದೇ ಮಧ್ಯ ಕರ್ನಾಟಕದ ಸೇಬಿನಾಕಾರದ ಈರುಳ್ಳಿ ಎಂಬ ಖ್ಯಾತಿ ಪಡೆದಿರುವ ಈರುಳ್ಳಿಯು ರೈತರ ಪಾಲಿಗೆ ಬಂಗಾರದಂತ ಲಾಭ ಕೊಡುವ ಬೆಳೆ ಎನಿಸಿದೆ. ಆದರೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಈರುಳ್ಳಿ ಕೊಳೆತು ಹೋಗಿದ್ದು, ಹಲವಡೆ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮಾತ್ರ ಈರುಳ್ಳಿ ಬೆಲೆ ನೆಲಕ್ಕೆ ಕುಸಿದಿದೆ. ಹೀಗಾಗಿ ಒಂದು ಕೆಜಿ ಈರುಳ್ಳಿ ಕೇವಲ 2 ರೂಪಾಯಿಯಿಂದ 3 ರೂಪಾಯಿಗೆ ಮಾತ್ರ ಸೇಲ್ ಆಗುತ್ತಿದೆ. ಹೀಗಾಗಿ ಸಾಲ ಮಾಡಿ ಈರುಳ್ಳಿ ಬೆಳೆದ ರೈತರು, ಸೂಕ್ತ ಬೆಲೆ ಸಿಗದೇ ಕಂಗಾಲಾಗಿದ್ದಾರೆ. ಈರುಳ್ಳಿಯನ್ನು ಡಿಸಿ ಕಚೇರಿ ಆವರಣದಲ್ಲಿ ಸುರಿದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಇಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ
ಇನ್ನು ರೈತರ ನಿರೀಕ್ಷಯಂತೆ, ಉತ್ತಮ ಬೆಳೆ ಬಂದರೂ ಸಹ ಲಾಭ ಸಿಗಲಾರದೇ ರೈತರು ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ರೈತರು ಬೆಳೆದಿರೋ ಈರುಳ್ಳಿಗೆ ಸರ್ಕಾರ ಕೂಡಲೇ ವೈಜ್ಞಾನಿಕವಾಗಿ ಬೆಂಬಲ ಬೆಲೆ ನಿಗದಿ ಪಡಿಸಬೇಕು. ಸರ್ಕಾರ ಕೂಡಲೇ ಸೂಕ್ತ ಪರಿಹಾರ ಒದಗಿಸುವ ಮೂಲಕ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು - ವಿಶೇಷತೆಗಳೇನು? ಟಿಕೆಟ್ ದರ ಎಷ್ಟು?
ಇನ್ನು ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಅಲ್ಬೂರು ಗ್ರಾಮದ ರೈತ ಕೊಚ್ಚಾಲಿ ಮಂಜುನಾಥ 9 ಎಕರೆಯಲ್ಲಿ ಈರುಳ್ಳಿ ಬೆಳೆದು, ದರ ಕುಸಿತದಿಂದ ಕಣ್ಣಿರು ಹಾಕುವ ಸ್ಥಿತಿ ಬಂದೊದಗಿದೆ. 9 ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದ ರೈತ ಮಂಜುನಾಥ, 8ರಿಂದ 9 ಲಕ್ಷ ಖರ್ಚು ಮಾಡಿದ್ದರು. ಇನ್ನೇನು ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಧಿಡೀರ್ ಅಂತಾ ದರ ಪಾತಾಳಕ್ಕೆ ಕುಸಿದಿದೆ. ಸದ್ಯ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಚೀಲ ಒಂದಕ್ಕೆ ಕೇವಲ 50 ರೂ. ಕೇಳುತ್ತಿದ್ದಾರೆ. ಇತ್ತ ಖರೀದಿ ಕೇಂದ್ರವಿಲ್ಲದೆ, ಬೆಂಬಲ ಬೆಲೆ ಇಲ್ಲದೆ ಅನ್ನದಾತರ ಬದುಕು ಬೀದಿಗೆ ಬಂದಿದೆ. ಇದನ್ನೂ ಓದಿ: ಸಬ್ ಮರಿನ್‌ಗಳನ್ನೇ ಬೇಟೆಯಾಡೋ ರಣ ಬೇಟೆಗಾರ ʻಅಂಡ್ರೋತ್ʼ!
ಒಟ್ಟಾರೆ ಪ್ರಕೃತಿ ಕೋಪಕ್ಕೆ ಸಿಲುಕಿ ನಷ್ಟ ಅನುಭವಿಸುತ್ತಿದ್ದ ಅನ್ನದಾತರು ಇದೀಗ ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಹೀಗಾಗಿ ರೈತರ ಶ್ರಮಕ್ಕೆ ಫಲ ಇಲ್ಲದಂತಾಗಿದೆ. ಇದನ್ನೂ ಓದಿ: ಯಲ್ಲಾಪುರ ಕಾನೂರು ಜಲಪಾತದಲ್ಲಿ ಫೋಟೋಶೂಟ್ ವೇಳೆ ಕಾಲುಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಕಾಣೆ
