ಮೊದಲು ಕ್ಷಮೆ ಕೇಳಿ ನಂತರ ನಿಮ್ಮ ಸಮಜಾಯಿಷಿ ನೀಡಿ: ಡಿಸಿಎಫ್ ವಿರುದ್ಧ ರೈತರ ಆಕ್ರೋಶ

Public TV
1 Min Read

ಹಾಸನ: ಯಾಕೆ ತಡವಾಗಿ ಬಂದ್ರಿ. ಮೊದಲು ನಮ್ಮ ಕ್ಷಮೆ ಕೇಳಿ ನಂತರ ನಿಮ್ಮ ಸಮಜಾಯಿಷಿ ನೀಡಿ ಎಂದು ಹಾಸನ ಡಿಸಿಎಫ್‍ನ ಬಸವರಾಜ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ, ಸಕಲೇಶಪುರ ತಾಲೂಕಿನ, ಬಾಗೆ ಗ್ರಾಮದಲ್ಲಿ ನಡೆದಿದೆ.

ನಗರದ ಸಕಲೇಶಪುರ ತಾಲೂಕಿನ ಆಲೂರು ಭಾಗದಲ್ಲಿ ಕಾಡಾನೆ ದಾಳಿ ಮಿತಿಮೀರಿದೆ. ಹಗಲು ವೇಳೆಯಲ್ಲೇ ಕಾಡಾನೆಗಳು ಗ್ರಾಮಕ್ಕೆ ಬರುತ್ತಿವೆ. ಎದುರು ಬಂದವರ ಮೇಲೆ ದಾಳಿ ಮಾಡುತ್ತಾ, ಬೆಳೆ ನಾಶ ಮಾಡುತ್ತಾ ತಿರುಗುತ್ತಿವೆ. ಹೀಗಾಗಿ ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ಬಾಗೆ ಗ್ರಾಮದಲ್ಲಿ ಶಾಸಕ ಹೆಚ್‍ಕೆ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಪರಿಸರವಾದಿಗಳ ತೀವ್ರ ವಿರೋಧ

ಬೆಳಗ್ಗೆಯಿಂದ ಪ್ರತಿಭಟನೆ ನಡೆದರೂ ಮಧ್ಯಾಹ್ನ ಒಂದೂವರೆ ನಂತರ ಅಧಿಕಾರಿ ಬಸವರಾಜ್ ಆಗಮಿಸಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು, ನಾವು ಬೆಳಗ್ಗೆಯಿಂದ ಹೋರಾಟ ಮಾಡುತ್ತಿದ್ದು, ನೀವು ಈಗ ಬಂದಿದ್ದೀರಿ. ನಮ್ಮ ಪ್ರತಿಭಟನೆಗೆ ಬೆಲೆಯಿಲ್ಲವಾ? ತಡವಾಗಿ ಬಂದವರನ್ನ ಯಾಕೆ ಚೇರ್ ಹಾಕಿ ಕೂರಿಸಿದ್ದೀರಿ ಕ್ಷಮೆ ಕೇಳಿ ನಂತರ ಏನು ಮಾಡಿದ್ದೀರಿ ಹೇಳಿ ಎಂದು ಆಕ್ರೋಶ ಹೊರಹಾಕಿದರು. ನಂತರ ಅಧಿಕಾರಿ, ನಾನು ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ ಎಂದು ಹೇಳಿ, ರೈತರ ಕ್ಷಮೆ ಕೇಳಿ ತಾವು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್

Share This Article
Leave a Comment

Leave a Reply

Your email address will not be published. Required fields are marked *