ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ – ವಿಕ್ಕಿ ಕೌಶಲ್ ಮತ್ತು ಮೌನಿ ರಾಯ್ – ಸೂರಜ್ ನಂಬಿಯಾರ್ ನಂತರ ಇದೀಗ ಮತ್ತೊಂದು ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ.
ಇದೇ ಫೆಬ್ರವರಿ 21ರಂದು ಫರ್ಹಾನ್ ಅಖ್ತರ್ ಮತ್ತು ಅವರ ಗೆಳತಿ ಶಿಬಾನಿ ದಾಂಡೇಕರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕ್ಯೂಟ್ ಜೋಡಿ ನಾಲ್ಕು ವರ್ಷಗಳಿಂದ ರಿಲೇಶನ್ ಶಿಪ್‍ನಲ್ಲಿದ್ದರು. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಅವರಿಬ್ಬರ ವಿವಾಹ ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ನೆರವೇರಲಿದೆ ಎಂದು ಫರ್ಹಾನ್ ಅಖ್ತರ್ ಅವರ ತಂದೆ ಜಾವೇದ್ ಅಖ್ತರ್ ತಿಳಿಸಿದ್ದಾರೆ. ಇದನ್ನೂ ಓದಿ: ‘ನಿಮ್ಮ ಶಾಯರಿ ಏಕೆ ಕೆಟ್ಟದಾಗಿದೆ’ – ಟ್ರೋಲಿಗರ ಪ್ರಶ್ನೆಗೆ ಸಾರಾ ಖಡಕ್ ಉತ್ತರ
View this post on Instagram
ಈ ತಿಂಗಳು ನಡೆಯಲಿರುವ ಮದುವೆಯ ದಿನಾಂಕವನ್ನು ಜಾವೇದ್ ಅಖ್ತರ್ ಅಧಿಕೃತವಾಗಿ ತಿಳಿಸಿದ್ದು, ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಾಂಡೇಕರ್ ಈ ತಿಂಗಳು ವಿವಾಹವಾಗಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಸಂದರ್ಶನದಲ್ಲಿ ಹೌದು ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದೆ. ಅದನ್ನು ಮದುವೆಯ ಯೋಜಕರು ನೋಡಿಕೊಳ್ಳುತ್ತಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಫರ್ಹಾನ್ ಮತ್ತು ಶಿಬಾನಿ ವಿವಾಹಕ್ಕೆ ಕೇವಲ ಆಪ್ತರು ಹಾಗೂ ಸ್ನೇಹಿತರಿಗಷ್ಟೇ ಆಹ್ವಾನಿಸಲಾಗಿದೆ ಎಂದಿದ್ದಾರೆ.
ಇದೇ ವೇಳೆ ಶಿಬಾನಿ ಒಳ್ಳೆಯ ಹುಡುಗಿ, ನಮ್ಮ ಇಡೀ ಕುಟುಂಬ ಅವಳನ್ನು ಇಷ್ಟಪಡುತ್ತದೆ. ಮುಖ್ಯವಾಗಿ ಫರ್ಹಾನ್‍ರನ್ನು ಅವಳು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಹಾಡಿ ಹೊಗಳಿದ್ದಾರೆ. ಜನವರಿ 17ರಂದು ಜಾವೇದ್ ಅಖ್ತರ್ ಅವರ ಹುಟ್ಟುಹಬ್ಬದ ಫೋಟೋವೊಂದನ್ನು ಫರ್ಹಾನ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಶಿಬಾನಿ ಕೂಡ ಇರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: 38 ಕೋಟಿ ಮೌಲ್ಯದ ಆಸ್ತಿಯನ್ನು ಶಿಲ್ಪಾ ಶೆಟ್ಟಿಗೆ ವರ್ಗಾಯಿಸಿದ ರಾಜ್ ಕುಂದ್ರಾ

			
		
		
		
		