ಕೆಲವರು ಧರ್ಮವನ್ನೂ ಮೀರಿ ದೇವರ ಆರಾಧನೆಯಲ್ಲಿ ನಂಬಿಕೆ ಇಡ್ತಾರೆ. ಇದೀಗ ಬಾಲಿವುಡ್ ನಿರ್ದೇಶಕಿ, ನೃತ್ಯ ನಿರ್ದೇಶಕಿ, ನಟಿ ನಿರ್ಮಾಪಕಿ ಫರ‍್ಹಾ ಖಾನ್ (Farah Khan) ರಿಷಿಕೇಶಕ್ಕೆ ತೆರಳಿ ಗಂಗಾರತಿಯಲ್ಲಿ (Ganga aarti) ಪಾಲ್ಗೊಂಡಿದ್ದಾರೆ. ಕೈಮುಗಿದು ಓಂ ನಮಃ ಶಿವಾಯ ಎಂದಿದ್ದಾರೆ. ಜೈ ಭೋಲೇನಾಥ್ ಎಂದಿರುವ ದೃಶ್ಯಗಳನ್ನ ಅವರೇ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ಲಾಂ ಧರ್ಮದ ಫರ‍್ಹಾ ಖಾನ್ ಮೊದಲ ಬಾರಿ ರಿಷಿಕೇಶಕ್ಕೆ (Rishikesh) ತೆರಳಿದ್ದು, ಇದನ್ನು ಅದ್ಭುತ ಅನುಭವ ಎಂದು ವರ್ಣಿಸಿದ್ದಾರೆ.
ತಮ್ಮ ಮನೆಯ ಅಡುಗೆಭಟ್ಟ ದಿಲೀಪ್ ಜೊತೆ ರಿಷಿಕೇಶಕ್ಕೆ ತೆರಳಿರುವ ಫರ‍್ಹಾ ಅಲ್ಲಿ ಧಾರ್ಮಿಕ ಆಚರಣೆಯಲ್ಲಿ ಶ್ರದ್ಧೆಯಿಂದ ಪಾಲ್ಗೊಂಡ ಬಗೆ ವಿಶೇಷವಾಗಿದೆ. ಹಣೆಯಲ್ಲಿ ಸಿಂಧೂರವಿಟ್ಟು ಕೈ ಮುಗಿದು ದೇವರಲ್ಲಿ ಬೇಡಿಕೊಂಡಿದ್ದಾರೆ. ದೀಪ ಹಿಡಿದು ಗಂಗಾರತಿ ಮಾಡಿದ್ದಾರೆ. ಹೀಗೆ ಧಾರ್ಮಿಕ ಆಚರಣೆ ಮಾಡ್ತಿರುವ ಫರ‍್ಹಾ ಫೋಟೋ ವೀಡಿಯೋಗಳು ಇನ್ಸ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಅನೇಕರು ಫರ‍್ಹಾ ಖಾನ್ ನಡೆದುಕೊಂಡ ರೀತಿಗೆ ಭೇಷ್ ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಅಸ್ತಗ್‌ಫಿರುಲ್ಲ (ದೇವರ ಆಶೀರ್ವಾದ ನಿಮ್ಮ ಮೇಲಿರಲಿ) ಎಂದು ಕಾಮೆಂಟ್ ಬರೆದಿದ್ದಾರೆ. ಹೀಗೆ ಫರ‍್ಹಾ ಖಾನ್ ಧಾರ್ಮಿಕ ಆಚರಣೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.