ಬಾಗೇಪಲ್ಲಿ ಗೇಟ್‌ ಬಳಿ ದರ್ಶನ್‌ ಕಾರು ಅಡ್ಡಗಟ್ಟಿದ ಅಭಿಮಾನಿಗಳು

Public TV
1 Min Read

ಚಿಕ್ಕಬಳ್ಳಾಪುರ: ಬಳ್ಳಾರಿ ಜೈಲಿಂದ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಿದ್ದ ನಟ ದರ್ಶನ್‌ (Darshan) ಕಾರನ್ನು ಅಭಿಮಾನಿಗಳು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಗೇಟ್‌ ಬಳಿ ತಡೆದ ಘಟನೆ ನಡೆಯಿತು.

ಕೊಲೆ ಪ್ರಕರಣದಲ್ಲಿ 6 ವಾರಗಳ ಮಧ್ಯಂತರ ಜಾಮೀನು ಪಡೆದ ದರ್ಶನ್‌ ಇಂದು ಜೈಲಿನಿಂದ ಬಿಡುಗಡೆಯಾದರು. ರಾಷ್ಟ್ರೀಯ ಹೆದ್ದಾರಿ 44 ಮೂಲಕ ಬೆಂಗಳೂರಿಗೆ ದರ್ಶನ್‌ ಆಗಮಿಸುತ್ತಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ತಲುಪಲಿದ್ದಾರೆ. ಇದನ್ನೂ ಓದಿ: ದರ್ಶನ್ ರಿಲೀಸ್ ಆಗಿದ್ದಕ್ಕೆ ಥ್ಯಾಂಕ್ ಗಾಡ್ ಎಂದ ಸೋನಲ್

ದರ್ಶನ್‌ ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರದಲ್ಲಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ದರ್ಶನ್‌ ಕಾರು ಕಂಡ ತಕ್ಷಣ ರಸ್ತೆಯಲ್ಲೇ ಅಡ್ಡಗಟ್ಟಿದರು. ಭದ್ರತಾ ಸಿಬ್ಬಂದಿ ಅವರನ್ನು ನಿಯಂತ್ರಿಸಿ ಬಳಿಕ ಕಾರು ಪ್ರಯಾಣಕ್ಕೆ ಅನುವು ಮಾಡಿಕೊಟ್ಟರು.

ದರ್ಶನ್‌ ಇರುವ ಕಾರನ್ನು ನಟ ಧನ್ವೀರ್‌ ಚಾಲನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ದರ್ಶನ್ ಬಿಡುಗಡೆ ಹಿನ್ನೆಲೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಫ್ಯಾನ್ಸ್

Share This Article