2028 ರವರೆಗೆ ಅಭಿಮಾನಿಗಳು ಕಾಯಬೇಕು: ಸಿಎಂ ಸ್ಥಾನದ ಬಗ್ಗೆ ಸತೀಶ್ ಜಾರಕಿಹೊಳಿ ಮಾತು

Public TV
1 Min Read

ಬೆಳಗಾವಿ: 2028 ರವರೆಗೆ ಅಭಿಮಾನಿಗಳು ಕಾಯಬೇಕು ಎಂದು ಸಿಎಂ ಸ್ಥಾನದ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪ್ರತಿಕ್ರಿಯೆ ನೀಡಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ (Siddaramaiah) ಇದ್ದಾರೆ ಅವರೇ ಮುಂದುವರೆಯುತ್ತಾರೆ. ನಾವೆಲ್ಲೂ ಸಿಎಂ ಸ್ಥಾನವನ್ನು ಕ್ಲೆಮ್ ಮಾಡಿಲ್ಲ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡೋ ಅವಶ್ಯಕತೆ ಇಲ್ಲ. ಅನೇಕರು ಈಗಾಗಲೇ ಸಿಎಂ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ್ ಜಾರಕಿಹೊಳಿ ಸಿಎಂ ಆಗಲಿ – ಅಭಿಮಾನಿಗಳ ಅಭಿಯಾನ

ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಂತಾ ಅಭಿಯಾನ ವಿಚಾರವಾಗಿ ಮಾತನಾಡಿ, ಯಾರೋ ಒಬ್ಬರು ಹಾಕಿದ್ರೆ ರಾಜ್ಯದ ಅಭಿಪ್ರಾಯ ಆಗಲ್ಲ. ಎಲ್ಲಾ ಕಡೆ ಆರಂಭವಾಗಿದ್ದಾಗ ನಮ್ಮವರು ಹಾಕಿದ್ದಾರೆ. ರಾಜ್ಯದಲ್ಲಿ ಅಂತಹ ಸನ್ನಿವೇಶ ಇಲ್ಲ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಮುಂದುವರೆಯುತ್ತಾರೆ ಎನ್ನುವ ನಂಬಿಕೆ ಇದೆ. ದೆಹಲಿಗೆ ಬೇರೆ ಕೆಲಸ ಇರುತ್ತೆ ಹೋಗಿರ್ತೀವಿ. ಎಂ.ಬಿ.ಪಾಟೀಲ್, ಶಿವಾನಂದ, ದೇಶಪಾಂಡೆ ಅನೇಕರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಸಿದ್ದರಾಮಯ್ಯ ಪರ ನ್ಯಾಯ ಸಿಗುತ್ತೆ ಎನ್ನುವ ನಂಬಿಕೆ ಇದೆ. ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ ಎನ್ನುವ ವಿಶ್ವಾಸ ಇದೆ ಎಂದರು. ಇದನ್ನೂ ಓದಿ: ರಾಹುಲ್‌ ಗಾಂಧಿ ಅಮೆರಿಕ ಪ್ರವಾಸ – ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಿದ ಸ್ಯಾಮ್‌ ಪಿತ್ರೋಡಾ

ಈಗ ಸಿಎಂ ಕನಸು ಕಂಡಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯಗೆ ಬೆಂಬಲ ನೀಡಿದ್ದೇನೆ. ಯಾವುದೋ ಸಂದರ್ಭದಲ್ಲಿ ಅಭಿಮಾನಿಗಳು ಹೇಳಿಕೆ ಕೊಟ್ಟಿರುತ್ತಾರೆ. ಎಲ್ಲಿಯೂ ನಾನೇ ಸಿಎಂ ಆಗ್ತೇನಿ ಅಂತಾ ಯಾರು ಹೇಳಿಲ್ಲ. ಈ ರೀತಿ ಹೇಳಿಕೆ ಎಪೆಕ್ಟ್ ಆಗುವುದಿಲ್ಲ. 2028ಕ್ಕೆ ಸಿಎಂ ಆಗುವ ತಯಾರಿ ಇದೆ ನಮ್ಮದು. ಅಲ್ಲಿಯವರೆಗೆ ಅಭಿಮಾನಿಗಳು ಕಾಯಬೇಕು ಎಂದು ಸಲಹೆ ನೀಡಿದರು.

Share This Article