ಡಾ.ವಿಷ್ಣು ಸಮಾಧಿ ಸಂರಕ್ಷಣೆಗಾಗಿ ವಾಣಿಜ್ಯ ಮಂಡಳಿ ಮುಂದೆ ಅಭಿಮಾನಿಗಳ ಪ್ರತಿಭಟನೆ

Public TV
2 Min Read

ಬೆಂಗಳೂರಿನ ಅಭಿಮಾನ ಸ್ಟುಡಿಯೋ ಅವರಣದಲ್ಲಿ ಹೆಸರಾಂತ ನಟ ಡಾ.ವಿಷ್ಣುವರ್ಧನ್ ಸಮಾಧಿ ಸಂರಕ್ಷಣೆ ಮತ್ತು ಸ್ಮಾರಕ ಮಾಡಲು ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ಮನವಿ ಮಾಡಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಅಕಾಡೆಮಿ ವತಿಯಿಂದ ಬೆಂಗಳೂರಿನ ಅಭಿಮಾನ ಸ್ಟುಡಿಯೋ ಆವರಣದಲ್ಲಿರುವ ವಿಷ್ಣುವರ್ಧನ್ ಅವರ ಸ್ಮಾರಕದ ಸಂರಕ್ಷಣೆಗೆ ಆಗ್ರಹಿಸಿ ಪ್ರತಿಭಟನಾ ಧರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಾಡಪ್ರೇಮಿ ಡಾ.ವಿಷ್ಣು ಅಕಾಡೆಮಿ ಗೌರವಾಧ್ಯಕ್ಷರಾದ ಕ್ರಾಂತಿ ರಾಜು, ಕನ್ನಡ ಪರ ಹೋರಾಟಗಾರ ಪಾಲನೇತ್ರ,  ಅಕಾಡೆಮಿಯ ಸದಸ್ಯರು, ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಕ್ರಾಂತಿ ರಾಜು, ‘ಅಭಿಮಾನಿಗಳಿಂದ ಸಾಹಸಸಿಂಹ, ವಿಷ್ಣುದಾದ ಎಂಬ ಹಲವಾರು ಬಿರುದು ಪಡೆದ ಡಾ.ವಿಷ್ಣುವರ್ಧನ್ ಅವರು ಅಪ್ರತಿಮ ಕಲಾವಿದರು. 35ವರ್ಷಗಳ ಕಲಾಸೇವೆ ಮತ್ತು ನೂರಾರು ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದಿದ್ದಾರೆ. ನಮ್ಮ ರಾಜ್ಯದಲ್ಲಿ  ಕಲೆ, ಕಲಾವಿದರನ್ನು ದೇವರಂತೆ ಆರಾಧಿಸುವ ಕನ್ನಡಿಗರ ಇದ್ದಾರೆ. ವಿಷ್ಣುವರ್ಧನ್ ಆಗಲಿಕೆಯಿಂದ ಕನ್ನಡ ಚಿತ್ರರಂಗ ಮತ್ತು ಅಭಿಮಾನಿಗಳಿಗೆ  ಅಪಾರ ನೋವು, ನಷ್ಟವಾಗಿದೆ’ ಎಂದರು.

ಮುಂದುವರೆದು ಮಾತನಾಡಿ ರಾಜು, ‘ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ ಸ್ಟುಡಿಯೋ ಆವರಣದಲ್ಲಿರುವ ವಿಷ್ಣುವರ್ಧನ್‌ ಅವರ ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕ ಎಂದು ಘೋಷಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಲಾಗುವುದು. ವಿಷ್ಣುವರ್ಧನ್ ಅವರ ಕೊಟ್ಯಂತರ ಅಭಿಮಾನಿಗಳ ಆಸೆ ಅವರ ಅಂತ್ಯಕ್ರಿಯೆ ನಡೆದ ಸ್ಥಳ ನೋಡಬೇಕು, ಗೌರವ ಸಲ್ಲಿಸಬೇಕು ಎಂಬುದಾಗಿದೆ’ ಎಂದರು. ಇದನ್ನೂ ಓದಿ: ನಟ ಉಪೇಂದ್ರ ಪಕ್ಷಕ್ಕೆ ಅಧಿಕೃತ ಚಿಹ್ನೆ ನೀಡಿದ ಚುನಾವಣಾ ಆಯೋಗ

ಕನ್ನಡ ಪರ ಹೋರಾಟಗಾರ ಪಾಲನೇತ್ರ ಮಾತನಾಡಿ ‘ಕನ್ನಡ ನಾಡಿಗೆ ಅಮೂಲ್ಯರತ್ನ ಸಾಹಸಿಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳದಲ್ಲಿ ಸಾವಿರಾರು ಅಭಿಮಾನಿಗಳು ಪ್ರತಿನಿತ್ಯ ಆಗಮಿಸಿ, ಗೌರವ ಸಲ್ಲಿಸುತ್ತಿದ್ದಾರೆ. ಪ್ರತಿದಿನ ಒಂದಲ್ಲ, ಒಂದು ಸಮಾಜಮುಖಿ ಚಟುವಟಿಕೆಗಳು ನಡೆಯುತ್ತಿದೆ, ಅಭಿಮಾನಿಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ಕೂಡಲೆ ರಾಜ್ಯ ಸರ್ಕಾರ ಅಭಿಮಾನ ಸ್ಟುಡಿಯೊ ಸಂಸ್ಥೆಯವರ ಜೊತೆಯಲ್ಲಿ ಚರ್ಚಿಸಿ, ಸಮಾಧಿ ಸ್ಥಳ ಉಳಿಸಿ, ಸ್ಮಾರಕ ಮಾಡಬೇಕು ಎಂದು ಮನವಿ ಮಾಡಿದರು’ ಎಂದರು.

ವಾಣಿಜ್ಯ ಮಂಡಳಿ ಮುಂದೆ ನಡೆದ ಹೋರಾಟದಲ್ಲಿ ಸಾವಿರಾರು ವಿಷ್ಣು ಅಭಿಮಾನಿಗಳು ಜೊತೆಯಾಗಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಅವರಿಗೆ ಮನವಿ ಪತ್ರವನ್ನು ನೀಡಲಾಯಿತು. ಸರಕಾರದ ಜೊತೆ ಮಾತನಾಡಿ, ವಿಷ್ಣು ಅಭಿಮಾನಿಗಳ ಜೊತೆ ನಿಂತುಕೊಳ್ಳುವಂತೆ ಮನವಿ ಆಗ್ರಹಿಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *