ದರ್ಶನ್ ಬಿಡುಗಡೆಗಾಗಿ ದೇವಿ ಮೊರೆ ಹೋದ ಫ್ಯಾನ್ಸ್‌- ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ

Public TV
1 Min Read

ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ (Renukaswamy Murder Case) ಅರೆಸ್ಟ್ ಆಗಿರುವ ದರ್ಶನ್ (Darshan) ರಿಲೀಸ್‌ಗಾಗಿ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ. ಅನಂತ ಪೂರ್ಣಿಮ ದಿನದಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಕಾಳಿಕಾಂಬ ದೇವಿಗೆ ದರ್ಶನ್ ಅಭಿಮಾನಿಗಳು (Fans) ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ರಣ್‌ವೀರ್ ಸಿಂಗ್, ಅಕ್ಷಯ್ ಕುಮಾರ್ ಮನೆ ಪಕ್ಕ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಪೃಥ್ವಿರಾಜ್

ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ಸಂಕಷ್ಟದಲ್ಲಿರುವ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಅಂತ ಶಕ್ತಿ ದೇವತೆ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ ಫ್ಯಾನ್ಸ್. ದೇವಿಯ ಆರಾದಿಸಿದರೆ ಎಂತಹ ಕಷ್ಟಗಳಿದ್ರೂ ನಿವಾರಣೆ ಆಗ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದ್ದು, ಸೆ.18ರ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಅಭಿಮಾನಿಗಳು ಕೈಯಲ್ಲಿ ಬೂದುಕುಂಬಳಕಾಯಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಡೀ ರಾತ್ರಿ ಬೂದುಗುಂಬಳ ಕಾಯಿ ದೀಪ ಆರದಂತೆ ಕಾವಲು ಕಾದಿದ್ದಾರೆ.

ಇನ್ನೂ ಇಂದು (ಸೆ.19) ದರ್ಶನ್ ನೋಡಲು ಬಳ್ಳಾರಿ ಜೈಲಿಗೆ ತಾಯಿ ಮೀನಾ ತೂಗುದೀಪ ಕುಟುಂಬದ ಜೊತೆ ಭೇಟಿ ನೀಡಿದ್ದಾರೆ. ಮಗನ ಸ್ಥಿತಿ ಕಂಡು ಮೀನಾ ಕಣ್ಣೀರಿಟ್ಟಿದ್ದಾರೆ.

Share This Article