ಮಂಡ್ಯ: ಕರ್ಮಭೂಮಿಯಲ್ಲಿ ಕರ್ಣನಿಗೆ ನಮನ ಸಲ್ಲಿಸಲು ರಾತ್ರಿಯಿಂದಲೇ ತಂಡೋಪತಂಡವಾಗಿ ಜನ ಸಾಗರ ಹರಿದು ಬರುತ್ತಿದೆ. ರಾತ್ರಿ ಗಂಟೆಯಿಂದ ಗಂಟೆಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತಿತ್ತು.
ಮಹಿಳೆಯರು-ಮಕ್ಕಳು ಸೇರಿದಂತೆ ಸರದಿ ಸಾಲಿನಿನಲ್ಲಿ ನಿಂತು ಅಭಿಮಾನಿಗಳು ಅಂಬಿ ದರ್ಶನ ಮಾಡಿದರು. ಕೆಲವರು ಕಬ್ಬು ಹಿಡಿದುಕೊಂಡು ಬಂದು ಅಂಬರೀಶ್ ಅವರಿಗೆ ಗೌರವರ್ಪಣೆ ಮಾಡಿದರು. ಅಂಬಿ ಪುತ್ರ ಅಭಿಷೇಕ್ ಜೊತೆ ನಟ ಯಶ್ ನಿಂತಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ರಾತ್ರಿ 2.30ರ ವರೆಗೆ ಸಚಿವ ಪುಟ್ಟರಾಜ್ ಮತ್ತು ಯಶ್ ವೇದಿಕೆ ಮೇಲೆ ನಿಂತಿದ್ದರು.
ಪೊಲೀಸ್ ಕೈಗೆ ಗಾಯ:
ಸಾರ್ವಜನಿಕರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ವಿಐಪಿ ಗೇಟ್ ಬಳಿ ನೂಕು ನುಗ್ಗಲು ಉಂಟಾಗಿದ್ದರಿಂದ ಗೇಟ್ ಬಳಿಯಿದ್ದ ಪೊಲೀಸ್ ಒಬ್ಬರು ಕೈಗೆ ಗಾಯ ಮಾಡಿಕೊಂಡಿದ್ದಾರೆ.
ಬೆಂಗಳೂರಿಗಿಂತ ಹೆಚ್ಚಿನ ಅಭಿಮಾನ ಸಾಗರ ಮಂಡ್ಯದಲ್ಲಿ ಹರಿದು ಬಂದಿದೆ. ಬೆಂಗಳೂರಿನಿಂದ ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಮೈದಾನಕ್ಕೆ ಹೆಲಿಕಾಪ್ಟರ್ ಆಗಮಿಸುತ್ತಿದ್ದಂತೆಯೇ `ಅಂಬಿ ಅಮರ್ ರಹೇ’ ಅನ್ನೋ ಘೋಷಣೆ ಮುಗಿಲು ಮುಟ್ಟಿತ್ತು. ಅಭಿಮಾನಿಗಳು ಕಣ್ಣೀರು ಹಾಕಿದ್ರು.
https://www.youtube.com/watch?v=C-hQ4AFVKeo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv