ಎಚ್ಡಿಕೆ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು, ಜೆಡಿಎಸ್ ಮುಖಂಡರು

Public TV
1 Min Read

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 60ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು.

ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಕೆಲವರು ಕೇಕ್ ಕತ್ತರಿಸಿ, ಸಿಹಿ ಹಂಚಿ, ಬಡವರಿಗೆ ಬಟ್ಟೆ ವಿತರಣೆ, ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರೆ, ಇನ್ನೂ ಕೆಲವರು ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿದರು.

ರಾಮನಗರದಲ್ಲಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಚಾಮುಂಡೇಶ್ವರಿ ದೇವಾಲಯ, ಬಲಮುರಿ ಗಣಪತಿ ದೇವಾಲಯ, ಸಂತ ಲೂರ್ದು ಚರ್ಚ್ ಹಾಗೂ ಮಸೀದಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಹೆಚ್‍ಡಿಕೆ ಅಭಿಮಾನಿಗಳು ಮತ್ತು ಸ್ನೇಹಿತರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಮತ್ತು ಅರ್ಚಕರಹಳ್ಳಿಯ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲು ವಿತರಿಸಿದರು.

ಕುಮಾರಣ್ಣ ಅಭಿಮಾನಿಗಳ ಬಳಗದ ವತಿಯಿಂದ ರಾಮನಗರದ ಇರುಳಿಗರ ಕಾಲೋನಿಯಲ್ಲಿ ಜನರಿಗೆ ಕಂಬಳಿ, ಸೀರೆಯನ್ನು ಉಚಿತವಾಗಿ ವಿತರಿಸಿ, ಕೇಕ್ ಕತ್ತರಿಸಿ ಸಂಭ್ರಮದಿಂದ ಆಚರಣೆ ನಡೆಸಿದರು.

ರಾಮನಗರದ ಶಾಸಕರ ಭವನದಲ್ಲಿಯೂ ಜೆಡಿಎಸ್ ಕಾರ್ಯಕರ್ತರು ಹಾಗೂ ಪದಾಕಾರಿಗಳು ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡಿದರು. ಕುಮಾರಸ್ವಾಮಿಯವರಿಗೆ ಅನಾರೋಗ್ಯದ ಹಿನ್ನಲೆ ಇಂದು ಅವರ 60ನೇ ಹುಟ್ಟುಹಬ್ಬವನ್ನು ಸರಳವಾಗಿ, ವಿಶೇಷವಾಗಿ ಆಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *