ಶ್ರೀಗಂಧದಿಂದ ಅಪ್ಪು ಪ್ರತಿಮೆ ಮಾಡಿಸಿದ ಅಭಿಮಾನಿ

Public TV
1 Min Read

ಭಿಮಾನಿಯೊಬ್ಬರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಶ್ರೀಗಂಧದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪ್ರತಿಮೆ ಮಾಡಿಸಿ, ಅಪ್ಪು ಅವರ ಪತ್ನಿಗೆ ನೆನಪಿನ ಕಾಣಿಕೆಯಾಗಿ ನೀಡಲು ಮುಂದಾಗಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸ್ವರೂಪ್, ಪುನೀತ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಈ ಹಿನ್ನೆಲೆ ಶ್ರೀಗಂಧದಿಂದ ಅಪ್ಪುವಿನ ಪ್ರತಿಮೆಯನ್ನು ಮಾಡಿಸಿ, ಜೂನ್ ತಿಂಗಳಿನಲ್ಲಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಪ್ರತಿಮೆಯನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ಕೊಡುಗೆಯಾಗಿ ನೀಡಲು ನಿರ್ಧರಿಸಿದ್ದಾರೆ.

ಈ ಪ್ರತಿಮೆ ಸುಮಾರು ಒಂದುವರೆ ಲಕ್ಷ ರೂ. ವೆಚ್ಚದಲ್ಲಿ ಸಿದ್ಧವಾಗಿದೆ. ಅಪ್ಪು ಪತ್ನಿ ಅಶ್ವಿನಿ ಅವರಿಗೆ ಈ ಪ್ರತಿಮೆ ನೀಡುವ ಮುನ್ನ ಇಂದು ತಾವು ನಂಬಿರುವ ಮಡಿಕೇರಿಯ ರಾಜರಾಜೇಶ್ವರಿ ದೇವಾಲಯದಲ್ಲಿ ಪ್ರತಿಮೆಗೆ ವಿಶೇಷ ಪೂಜೆ ಮಾಡಿಸಿದ್ದಾರೆ.

ಪೂಜೆಗೆ ಸಂತೋಷ್ ಆರ್ಯ, ಪ್ರದೀಪ್, ಪುರುಷೋತ್ತಮ್ ಯೋಗೇಶ್ ಸಂಗಡಿಗರು ಸಾಥ್ ನೀಡಿದ್ದರು. ಅಲ್ಲದೇ ಮೂರು ತಿಂಗಳಿನಿಂದ ಪ್ರತಿಮೆ ಮಾಡಿಸಲು ಪ್ರಯತ್ನ ನಡೆಸಿದ್ದರು. ಆದರೆ ಈ ಮೊದಲು ಎರಡು ಪ್ರತಿಮೆಗಳನ್ನು ಮಾಡಿಸಿ ಅವು ಅಪ್ಪು ಮುಖಭಾವ ಹೋಲಿಕೆಯಾಗದ ಕಾರಣ ಅವುಗಳನ್ನು ಕೈ ಬಿಟ್ಟು ನಾಲ್ಕನೇ ಬಾರಿಗೆ ಅಪ್ಪು ಪತ್ರಿಮೆ ಸಕ್ಸಸ್ ಆಗಿದೆ.

 

Share This Article
Leave a Comment

Leave a Reply

Your email address will not be published. Required fields are marked *