ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿಯರಿಗಾಗಿ ವಿವಿಧ ಕೆಲಸಗಳನ್ನ ಮಾಡಿ ಮೆಚ್ಚಿಸುವ ಕಾರ್ಯ ಮಾಡ್ತಾರೆ. ಕೆಲವರು ಗುಡಿ ಕಟ್ಟಿಸುತ್ತಾರೆ. ಹಲವರು ದಾನ-ಧರ್ಮ ಮಾಡ್ತಾರೆ. ಇದೀಗ ಸಮಂತಾ ಅಭಿಮಾನಿಯೊಬ್ಬ ಮನೆಯ ಮೇಲ್ಛಾವಣಿ ಪೂರ್ತಿ ಸಮಂತಾ (Samantha) ಅಭಿಮಾನದ ಹೊಳೆ ಹರಿಸಿದ್ದಾನೆ.
ಅಭಿಮಾನಿ ವಿಶಾಲವಾದ ತನ್ನ ಮನೆಯ ಟೆರೆಸ್ (Terrace) ಮೇಲೆ ಸಮಂತಾಳ ಸುಂದರ ಪೇಂಟಿಂಗ್ (Painting) ಮಾಡಿಸಿದ್ದಾನೆ. ರಮಣೀಯ ಗಿಡ ಮರಗಳ ಮಧ್ಯೆ ಬಿಳಿ ಬಣ್ಣದಲ್ಲಿ ವಿಶಾಲವಾದ ಪೇಂಟಿಂಗ್ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾನೆ ಅಭಿಮಾನಿ.
ಅಭಿಮಾನಿಗಳು ತೋರಿಸುವ ಪ್ರೀತಿ ಎಷ್ಟೋ ಸಾರಿ ಅವರ ನೆಚ್ಚಿನ ನಟ ನಟಿಯರವರೆಗೂ ತಲುಪೋದಿಲ್ಲ. ಆದರೆ ಅಭಿಮಾನಿಯ ಶ್ರಮ ಮತ್ತು ಪ್ರೀತಿ ಇದೀಗ ಸಮಂತಾಗೆ ತಲುಪಿದೆ. ಈ ವೀಡಿಯೋವನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮಂತಾ ಶೇರ್ ಮಾಡಿದ್ದಾರೆ. ʼಇದು ನಂಬಲಸಾಧ್ಯ ಕೆಲಸ, ನಿಮ್ಮ ಸಮಯ ಹಾಗೂ ಪ್ರಯತ್ನಕ್ಕೆ ತುಂಬಾ ಧನ್ಯವಾದ’ ಎಂದಿದ್ದಾರೆ. ಅಲ್ಲಿಗೆ ಕಷ್ಟಪಟ್ಟು ಸಮಂತಾ ಚಿತ್ರ ಬಿಡಿಸಿದ ಕಲಾವಿದನ ಕೆಲಸ ಸಮಂತಾಳ ಮೂವತ್ತೇಳು ಮಿಲಿಯನ್ ಫಾಲೋವರ್ಸ್ ಅನ್ನು ತಲುಪಿದೆ. ಸುಜಿತ್ ಹೆಸರಿನ ಬಿಗ್ ಸ್ಕೆಚ್ ಆರ್ಟಿಸ್ಟ್ ಈ ಕೆಲಸ ಮಾಡಿದ್ದಾನೆ.