ಆರ್‌ಸಿಬಿ ವಿಜಯೋತ್ಸವದ ವೇಳೆ ಹೃದಯಾಘಾತ – ಅಭಿಮಾನಿ ಸಾವು

Public TV
1 Min Read

ಬೆಳಗಾವಿ: ಆರ್‌ಸಿಬಿ (RCB) ಫೈನಲ್ ಪಂದ್ಯದಲ್ಲಿ ಭರ್ಜರಿ ಗೆಲುವು ಹಿನ್ನೆಲೆ ವಿಜಯೋತ್ಸವ ವೇಳೆ ಕುಣಿದು ಕುಪ್ಪಳಿಸುತ್ತಿದ್ದ ಅಭಿಮಾನಿಯೊಬ್ಬ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ಮಂಜುನಾಥ್ ಕುಂಬಾರ್ (25) ಹೃದಯಾಘಾತದಿಂದ ಸಾವನ್ನಪ್ಪಿದ ಯುವಕ. ಇದನ್ನೂ ಓದಿ: ಆರ್‌ಸಿಬಿ ಹುಡುಗರು ಕರ್ನಾಟಕಕ್ಕೆ ಗೌರವ, ಹೆಮ್ಮೆ ತಂದಿದ್ದಾರೆ: ಡಿಕೆಶಿ

ಮಂಗಳವಾರ ಅಹಮದಾಬಾದ್‌ನಲ್ಲಿ ಐಪಿಎಲ್ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ ಹಿನ್ನೆಲೆ ಅಭಿಮಾನಿಗಳು ವಿಜಯೋತ್ಸವ ಮಾಡಿದ್ದರು. ಈ ವೇಳೆ ಮಂಜುನಾಥ್ ಟ್ರ‍್ಯಾಕ್ಟರ್‌ನಲ್ಲಿ ಹಾಡು ಹಾಕಿ ಕುಣಿಯುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗ ಮಧ್ಯೆ ಮಂಜುನಾಥ್ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ:ಸರ್ಕಾರದಿಂದ ಹೊರ ಬಂದ ಬೆನ್ನಲ್ಲೇ ಟ್ರಂಪ್‌ ವಿರುದ್ಧ ಮಸ್ಕ್‌ ಕೆಂಡಾಮಂಡಲ

ಮೂಡಲಗಿ (Mudalagi) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಧ್ಯಾಹ್ನ ಬೆಂಗಳೂರಿಗೆ ಚಾಂಪಿಯನ್ಸ್ – ಸಂಜೆ ವಿಜಯೋತ್ಸವ ಮೆರವಣಿಗೆ | ಎಷ್ಟು ಗಂಟೆಗೆ ಏನು?

Share This Article