ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಗುದ್ದಿದ ಟ್ರಕ್: ತಪ್ಪಿದ ಭಾರೀ ಅನಾಹುತ

Public TV
1 Min Read

ನ್ನಡದಲ್ಲಿ ಸಾಕಷ್ಟು ಹಿಟ್ ಗೀತೆಗಳಿಗೆ ಧ್ವನಿಯಾಗಿರುವ, ತೆಲುಗಿನ ಖ್ಯಾತ ಗಾಯಕಿ (Singer) ಮಂಗ್ಲಿ (Mangli) ಅವರು ಪ್ರಯಾಣಿಸುತ್ತಿದ್ದ ಕಾರಿಗೆ (Car) ಅಪಘಾತವಾಗಿದೆ (Accident). ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಮಂಗ್ಲಿ ಸೇರಿದಂತೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಹೈದರಾಬಾದ್ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ, ಹಿಂಬದಿಯಿಂದ ಬಂದಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕಾರಿನ ಹಿಬ್ಬಂದಿ ನುಜ್ಜುಗುಜ್ಜಾಗಿದೆ. ಶಂಶಾಬಾದ್ ನಿಂದ ಮಂಗ್ಲಿ ತೆರಳುತ್ತಿರುವ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

 

ಘಟನೆಯ ಕುರಿತಂತೆ ಯಾರೂ ಆತಂಕ ಪಡಬೇಕಿಲ್ಲ ಎಂದು ಮಂಗ್ಲಿ ಹೇಳಿಕೆ ನೀಡಿದ್ದಾರೆ. ಎಲ್ಲರೂ ಸುರಕ್ಷಿತರಾಗಿ ಇದ್ದೇವೆ ಎಂದೂ ಅವರು ಮಾತನಾಡಿದ್ದಾರೆ. ಮಂಗ್ಲಿ ಮೂಲತಃ ತೆಲುಗು ಗಾಯಕಿಯಾಗಿದ್ದರೂ, ಅತೀ ಹೆಚ್ಚು ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ ಎನ್ನುವುದು ವಿಶೇಷ. ಅದರಲ್ಲೂ ಅವರು ರಾಬರ್ಟ್ ಚಿತ್ರಕ್ಕಾಗಿ ಹಾಡಿದ ಹಾಡು ಸಾಕಷ್ಟು ಫೇಮಸ್ ಆಗಿತ್ತು.

Share This Article