ಖ್ಯಾತ ನಟ ಕಲಾಭವನ್ ಹನೀಫ್ ನಿಧನ

Public TV
1 Min Read

ಲಯಾಳಂ (Malayalam) ಖ್ಯಾತ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ (Kalabhavan Hanif) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದಾರೆ.

ವಾರದಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪತ್ನಿ ವಹಿದಾ ತಿಳಿಸಿದ್ದಾರೆ. ಮಲಯಾಳಂ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಿಮಿಕ್ರಿ ಕಲೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಇವರಿಗೆ ಸಿತಾರಾ ಮತ್ತು ಶಾರುಖ್ ಇಬ್ಬರು ಮಕ್ಕಳಿದ್ದಾರೆ.

 

ಈವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾಭವನ್ ‘ಚೆಪ್ಪುಕಿಲುಕ್ಕಣ್ಣ ಚನಗತಿ’ ಸಿನಿಮಾದ ಮೂಲಕ 1991ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಮೊದ ಮೊದಲು ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.

Share This Article