ತಿರುಪತಿ ತಿಮ್ಮಪ್ಪನಿಗೆ ‘ಮುಡಿ’ ಕೊಟ್ಟ ಖ್ಯಾತ ನಟ ಧನುಷ್

Public TV
1 Min Read

ಮಿಳಿನ ಖ್ಯಾತ ನಟ ಧನುಷ್ (Dhanush) ಇಂದು ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕಾಣಿಸಿಕೊಂಡರು. ತಿಮ್ಮಪ್ಪನಿಗೆ (Tirupathi Thimmappa) ಮುಡಿ ಕೊಡುವ ಮೂಲಕ ಹರಕೆ ತೀರಿಸಿಕೊಂಡಿದ್ದಾರೆ. ಬೆಳ್ಳಂ ಬೆಳಗ್ಗೆ ತಿರುಪತಿಗೆ ಆಗಮಿಸಿದ್ದ ಧನುಷ್, ಮುಡಿ ಕೊಟ್ಟು ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಧನುಷ್ ಮಾತ್ರವಲ್ಲ ಅವರ ಮಕ್ಕಳಾದ ಯಾತ್ರಾ ಮತ್ತು ಲಿಂಗ ಕೂಡ ಮುಡಿ ನೀಡಿದ್ದಾರೆ.

ಸಾಮಾನ್ಯರಂತೆ ಸರದಿ ಸಾಲಿನಲ್ಲಿ ಮಕ್ಕಳೊಂದಿಗೆ ನಿಂತು ತಿಮ್ಮಪ್ಪನ ದರ್ಶನ ಮಾಡಿದ ಧನುಷ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಮಕ್ಕಳೊಂದಿಗೆ ಮುಡಿಕೊಟ್ಟು ಸಾಮಾನ್ಯ ಭಕ್ತರಂತೆ ನಡೆದುಕೊಂಡ ರೀತಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಲ್ಲದೇ, ಧನುಷ್ ಬಗ್ಗೆ ಅನೇಕರು ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ. ಇದನ್ನೂ ಓದಿ:ಗೋಲ್ಡನ್ ಟೆಂಪಲ್‌ನಲ್ಲಿ ಪಾತ್ರೆ ತೊಳೆದು ಸೇವೆ ಸಲ್ಲಿಸಿದ ರಾಘವ್- ಪರಿಣಿತಿ ಜೋಡಿ

ಕ್ಯಾಪ್ಟನ್ ಮಿಲ್ಲರ್ (Captain Miller) ಚಿತ್ರಕ್ಕಾಗಿ ಧನುಷ್ ಉದ್ದನೆಯ ಕೂದಲು ಬೆಳೆಸಿದ್ದರು. ಇದೀಗ ಸಿನಿಮಾದ ಕಂಪ್ಲೀಟ್ ಶೂಟಿಂಗ್ ಮುಗಿದಿದೆ. ಮೊನ್ನೆಯಷ್ಟೇ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ. ಈ ಫಸ್ಟ್ ಲುಕ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಧನುಷ್ ಅಪರೂಪದ ಪಾತ್ರವನ್ನು ಮಾಡಿದ್ದಾರೆ.

 

ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಕನ್ನಡದ ನಟ ಶಿವರಾಜ್ ಕುಮಾರ್ (Shivaraj Kumar) ಈ ಚಿತ್ರದಲ್ಲಿ ನಟಿಸಿದ್ದಾರೆ. ಧನುಷ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಈ ಚಿತ್ರದ ಮೂಲಕ ಶಿವಣ್ಣ ತಮಿಳು ಚಿತ್ರರಂಗಕ್ಕೆ ಹಾರಿದ್ದಾರೆ. ಧನುಷ್ ಮತ್ತು ಶಿವರಾಜ್ ಕುಮಾರ್ ಸಹೋದರರಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್