ಸಾಯಿ ಪಲ್ಲವಿ ಬದಲು ಮೃಣಾಲ್‌ಗೆ ವಿಜಯ್ ಚಾನ್ಸ್ ಕೊಟ್ಟಿದ್ದೇಕೆ?

Public TV
2 Min Read

ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ (Vijay Devarakonda) ನಟನೆಯ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ನಡುವೆ ಹೊಸ ವಿಚಾರವೊಂದು ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ. ವಿಜಯ್ ಜೊತೆ ನಟಿಸಲು ಸಾಯಿ ಪಲ್ಲವಿ (Sai Pallavi) ಫೈನಲ್‌ ಆಗಿದ್ದರು. ಆದರೆ ಲೈಗರ್ ಹೀರೋ ಮೃಣಾಲ್ ಠಾಕೂರ್ (Mrunal) ಮಣೆ ಹಾಕಿದ್ದೇಕೆ ಎಂದು ಚರ್ಚೆಯಾಗುತ್ತಿದೆ.

ವಿಜಯ್ ದೇವರಕೊಂಡ, ಮೃಣಾಲ್ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಇದೇ ಏಪ್ರಿಲ್ 5ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ. ವಿಜಯ್- ಮೃಣಾಲ್ ನಟಿಸಿರುವ ಚಿತ್ರದ ಹಾಡು, ಟ್ರೈಲರ್ ಮೂಲಕ ಪ್ರೇಕ್ಷಕರಿಗೆ ಮೋಡಿ ಮಾಡುತ್ತಿದೆ. ಈ ಚಿತ್ರದಲ್ಲಿ ಮೊದಲು ಹೀರೋ ಜೊತೆ ನಟಿಸಲು ಸೆಲೆಕ್ಟ್ ಆಗಿದ್ದು ಸಾಯಿ ಪಲ್ಲವಿ ಆದರೆ ಅವರ ಬದಲು ಮೃಣಾಲ್ ಯಾಕೆ ಅವಕಾಶ ಕೊಟ್ಟರು. ಏಕಾಏಕಿ ನಾಯಕಿ ಬದಲಾವಣೆ ಆಗಿದ್ದೇಕೆ? ಸಾಯಿ ಪಲ್ಲವಿಯಂತಹ ಪ್ರತಿಭಾನ್ವಿತ ನಟಿಯನ್ನು ಕೈಬಿಟ್ಟಿದ್ದೇಕೆ? ಎಂದು ಫ್ಯಾನ್ಸ್‌ ಪ್ರಶ್ನಿಸುತ್ತಿದ್ದಾರೆ.

ಕೋಟಿ ಕೋಟಿ ದುಡ್ಡು ಕೊಡುತ್ತೀವಿ ಅಂದ್ರು ಲಿಪ್ ಲಾಕ್, ಹಸಿ ಬಿಸಿ ದೃಶ್ಯಗಳಲ್ಲಿ ಸಾಯಿ ಪಲ್ಲವಿ ನಟಿಸಲ್ಲ. ಸಿನಿಮಾಗಳಲ್ಲಿ ನಟಿಸಲು ತಮ್ಮದೇ ಕೆಲವು ರೂಲ್ಸ್‌ಗಳನ್ನು ಇಂದಿಗೂ ಸಾಯಿ ಪಲ್ಲವಿ ಫಾಲೋ ಮಾಡ್ತಾರೆ. ವಿಜಯ್ ದೇವರಕೊಂಡ ಚಿತ್ರ ಅಂದ್ಮೇಲೆ ಅಲ್ಲಿ ಲಿಪ್ ಲಾಕ್ ಸೀನ್, ಕೆಲವು ಹಸಿ ಬಿಸಿ ದೃಶ್ಯಗಳು ಇದ್ದೇ ಇರುತ್ತದೆ. ಸಾಯಿ ಪಲ್ಲವಿ ಒಪ್ಪಲ್ಲ ಎಂದೇ ವಿಜಯ್, ಮೃಣಾಲ್‌ಗೆ ಚಾನ್ಸ್ ಕೊಟ್ಟಿದ್ದಾರೆ ಎಂದೇ ಟಾಕ್ ಆಗುತ್ತಿದೆ. ಇದನ್ನೂ ಓದಿ:ಅಮ್ಮನ ಲಾಲಿ: ಕನ್ನಡದಲ್ಲಿ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ

ಸಿನಿಮಾ ಕಥೆಗೆ ಹಸಿ ಬಿಸಿ ದೃಶ್ಯಗಳು ಅವಶ್ಯಕತೆ ಇದ್ರೆ ಮೃಣಾಲ್ ನಟಿಸುತ್ತಾರೆ. ಹಾಗಾಗಿ ವಿಜಯ್ ದೇವರಕೊಂಡ ಅವರು ಮೃಣಾಲ್‌ಗೆ ಜೈ ಎಂದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಕೂಡ ಡಿಯರ್ ಕಾಮ್ರೆಡ್ ಚಿತ್ರಕ್ಕೆ ಸಾಯಿ ಪಲ್ಲವಿ ಸೆಲೆಕ್ಟ್ ಆಗಿದ್ದರು. ಬೋಲ್ಡ್ ಆಗಿ ಸಾಯಿ ಪಲ್ಲವಿ ನಟಿಸಲ್ಲ ಎಂಬ ಕಾರಣಕ್ಕೆ ರಶ್ಮಿಕಾ ಮಂದಣ್ಣಗೆ ವಿಜಯ್ ಮಣೆ ಹಾಕಿದ್ದರು. ಈಗ ಮತ್ತೆ ಹಿಸ್ಟರಿ ರಿಪೀಟ್ ಆಗಿದೆ ಎಂಬ ಸುದ್ದಿ ಆಂಧ್ರದಲ್ಲಿ ಹರಿದಾಡುತ್ತಿದೆ.

‘ಲೈಗರ್’ (Liger) ಸಿನಿಮಾ ಮಕಾಡೆ ಮಲಗಿದ ಮೇಲೆ ಸಮಂತಾ (Samantha) ಜೊತೆ ‘ಖುಷಿ’ ಸಿನಿಮಾ ಮಾಡಿ ವಿಜಯ್‌ ದೇವರಕೊಂಡ ಗೆದ್ದರು. ಈಗ ಮತ್ತೆ ಫ್ಯಾಮಿಲಿ ಸ್ಟಾರ್ ಮೂಲಕ ನಟ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Share This Article