ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ: ಮೋದಿ

Public TV
1 Min Read

ನವದೆಹಲಿ: ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಟುವಾಗಿ ಘೋಷಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮೋದಿ ಅವರು, ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ. ಇತರೆ ಪಕ್ಷಗಳಲ್ಲಿನ ವಂಶಾಡಳಿತ ರಾಜಕಾರಣದ ವಿರುದ್ಧ ಹೋರಾಟ ನಡೆಸಬೇಕಿದೆ. ಹೀಗಾಗಿ ಯಾರಿಗಾದರೂ ಟಿಕೆಟ್ ನೀಡಲು ನಿರಾಕರಿಸಿದರೆ ಅದಕ್ಕೆ ನಾನೇ ಹೊಣೆಯಾಗಿರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

ಇದೇ ವೇಳೆ ಯುದ್ಧ ಪೀಡಿತ ಉಕ್ರೇನ್‍ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕುರಿತು ಪ್ರಧಾನಿ ಮೋದಿ ಅವರಿಗೆ ವಿವರಿಸಲಾಯಿತು. ಈ ವಿಚಾರವಾಗಿ ಬಿಜೆಪಿಯೇತರ ಮುಖ್ಯಮಂತ್ರಿಗಳು ಮಾಡಿದ ರಾಜಕೀಯದ ಬಗ್ಗೆಯೂ ಪ್ರಧಾನಿ ಮೋದಿಯವರಿಗೆ ತಿಳಿಸಲಾಗಿತು. ಇದನ್ನೂ ಓದಿ: ಹಿಜಬ್ ಇಸ್ಲಾಂ ಆಚರಣೆಯಲ್ಲ ಅನ್ನೋ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಲ್ಲ: ಯು.ಟಿ.ಖಾದರ್

ಬಿಜೆಪಿ ಸಂಸದ ಮನೋಜ್ ತಿವಾರಿ ಅವರು ಮೋದಿ ಅವರನ್ನು ಭೇಟಿಯಾದಾಗ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದರು. ಈ ಚಿತ್ರವು 1990ರ ದಶಕದಲ್ಲಿನ ಕಣಿವೆಯ ರಾಜ್ಯ ಕಾಶ್ಮೀರದಲ್ಲಿ ಹಿಂದೂಗಳು ವಲಸೆ ಹೋಗುವುದರ ಕುರಿತಾಗಿದೆ. ಒಂದು ಗುಂಪು ಸತ್ಯವನ್ನು ಈಗಲೂ ಸಹ ಸಮಾಧಿ ಮಾಡಲು ಪ್ರಯತ್ನಿಸುತ್ತಿದೆ. ಅವರು ಹಿಂದೆಯೂ ಅದೇ ರೀತಿ ಮಾಡಿದರು. ಆದರೆ ನಾವು ದೇಶದ ಮುಂದೆ ನಿಜವಾದ ಸತ್ಯವನ್ನು ಹೊರತರಬೇಕಾಗಿದೆ ಎಂದು ಹೇಳಿದರು. ಇದೇ ವೇಳೆ ಮೋದಿ ಅವರು ಕೂಡ ಇದೊಂದು ಉತ್ತಮ ಚಿತ್ರವಾಗಿದ್ದು, ಎಲ್ಲರೂ ಈ ಸಿನಿಮಾವನ್ನು ವೀಕ್ಷಿಸುವಂತೆ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *