ಅಹಮದಾಬಾದ್ | ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ

Public TV
1 Min Read

ಗಾಂಧಿನಗರ: ಒಂದೇ ಕುಟುಂಬದ ಐವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್‌ನ (Gujarat) ಅಹಮದಾಬಾದ್‌ನ (Ahmedabad) ಬಾವ್ಲಾ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ಬಾಗೋದರಾ (Bagodara) ಬಸ್ ನಿಲ್ದಾಣದ ಬಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ರಿಕ್ಷಾ ಚಾಲಕ ವಿಪುಲ್ ಕಾಂಜಿ ವಾಘೇಲಾ (34), ಅವರ ಪತ್ನಿ ಸೋನಾಲ್ (26), ಮಕ್ಕಳಾದ ಕರೀನಾ ಅಲಿ ಸಿಮ್ರಾನ್ (11), ಮಯೂರ (5) ಮತ್ತು ರಾಜ್‌ಕುಮಾರ್ (8) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಯಾರೀ ಕೇರಳ ನರ್ಸ್‌ ನಿಮಿಷಾ ಪ್ರಿಯಾ; ಯೆಮನ್‌ನಲ್ಲಿ ಗಲ್ಲುಶಿಕ್ಷೆಯೇ ಯಾಕೆ – ಏನಿದು ಸ್ಟೋರಿ!?

ಈ ಕುಟುಂಬದವರು ಮೂಲತಃ ಧೋಲ್ಕಾದ ಬಾರ್ಕೋಥಾದ ದೇವಿಪೂಜಕ್ ವಾಸ್ ಪ್ರದೇಶದವರಾಗಿದ್ದು, ಸ್ವಲ್ಪ ಸಮಯ ಹಿಂದೆ ಬಾಗೋದ್ರಾಗೆ ಬಂದು ನೆಲೆಸಿದ್ದರು. ವಿಪುಲ್ ಅವರು ಆಟೋ ಓಡಿಸಿ, ಬಂದ ಹಣದಲ್ಲಿ ಜೀವನವನ್ನು ಸಾಗಿಸುತ್ತಿದ್ದರು. ವಿಫುಲ್, ಶನಿವಾರ ತಡರಾತ್ರಿ ಮೂವರು ಮಕ್ಕಳು ಹಾಗೂ ಪತ್ನಿಯೊಂದಿಗೆ ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್ ಕೇಸ್ – ಬಾಗಲಕೋಟೆ ಆರೋಪಿಗೆ ಜಾಮೀನು

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದು, ಆರ್ಥಿಕ ಸಮಸ್ಯೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.

Share This Article