SSLC ವಿದ್ಯಾರ್ಥಿನಿ ಹತ್ಯೆ; ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು!

Public TV
1 Min Read

ಮಡಿಕೇರಿ: ಕೊಡಗಿನಲ್ಲಿ ಭೀಕರ ಹತ್ಯೆಗೀಡಾದ 10ನೇ ಬಾಲಕಿ ಮೀನಾ (Koagu Student Meena) ಅಂತ್ಯಕ್ರಿಯೆಯನ್ನು (Funeral) ಭಾನುವಾರ ಕುಟುಂಬಸ್ಥರು ಸ್ವಗ್ರಾಮದಲ್ಲಿ ನೇರವೇರಿಸಿದ್ದಾರೆ.

ಶನಿವಾರ (ಮೇ 4) ಬೆಳಗ್ಗೆಯಷ್ಟೇ ಬಾಲಕಿ ಹತ್ಯೆಗೈದ ಅರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ನನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು. ಅಲ್ಲದೇ ಹತ್ಯೆ ಮಾಡಿದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ಮಾಡುವ ವೇಳೆಯಲ್ಲಿ ಬಾಲಕಿ ರುಂಡವನ್ನು ಅವನಿಂದಲೇ ಪತ್ತೆ ಮಾಡಿಸಿ ವಿಚಾರಣೆಯನ್ನೂ ನಡೆಸಿದ್ದರು. ಇದನ್ನೂ ಓದಿ: ಲೂಟಿ, ಹಗರಣ ಮಾಡೋದೇ ಫುಲ್‌ ಟೈಮ್‌ ಬಿಸಿನೆಸ್‌ ಆಗಿದೆ: ಟಿಎಂಸಿ ವಿರುದ್ಧ ಮೋದಿ ಕೆಂಡ

ನಂತರ ಬಾಲಕಿಯ ರುಂಡವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದರು. ಅದರಂತೆ ಇಂದು (ಮೇ 5) ಮಡಿಕೇರಿ ಜಿಲ್ಲಾಸ್ಪತ್ರೆಯ ವೈದ್ಯರು. ಮಧ್ಯಾಹ್ನದ ಬಳಿಕ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿದ್ದರು. ಬಳಿಕ ಬಾಲಕಿಯ ಕುಟುಂಬಸ್ಥರು ಬಾಲಕಿಯ ಮೃತದೇಹವನ್ನು ಸೋಮವಾರಪೇಟೆ ತಾಲ್ಲೂಕಿನ ಸುರ್ಲಭಿ ಗ್ರಾಮದ ಕುಂಬಾರಗಡಿಗೆ ತೆಗೆದುಕೊಂಡು ಹೋಗಿ ಕೊಡವ ಸಾಂಪ್ರದಾಯದಂತೆ ಬಾಲಕಿಯ ಅಂತ್ಯಸಂಸ್ಕಾರ ನೇರವೇರಿಸಿದ್ದಾರೆ.

ಇನ್ನೂ ಗಂಭೀರವಾಗಿ ಗಾಯಗೊಂಡು ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ತಾಯಿ ಸಹ ಮಗಳ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು. ಇದನ್ನೂ ಓದಿ: ಕೊಡಗಿನ ಪ್ರವಾಸೋದ್ಯಮಕ್ಕೆ ದಕ್ಷಿಣ ಭಾರತದ ಅತಿ ದೊಡ್ಡ ಮತ್ತೊಂದು ಗ್ಲಾಸ್‌ ಸ್ಕೈ ವಾಕ್ ಬ್ರಿಡ್ಜ್ ಸೇರ್ಪಡೆ

Share This Article