ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು – ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

Public TV
2 Min Read

ಚಿಕ್ಕಬಳ್ಳಾಪುರ: ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಎಪಿಎಂಸಿ ಬಳಿ ಕಳೆದ ಗುರುವಾರ ಸಂಭವಿಸಿದ್ದ ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಕುಟುಂಬಸ್ಥರು ಸಾವಿನ ನೋವಿನಲ್ಲೂ ಆಕೆಯ ಕಣ್ಣುಗಳನ್ನು ದಾನ (Eye Donation) ಮಾಡುವ ಮೂಲಕ ಮಾನವೀಯತೆ, ಸಾರ್ಥಕತೆ ಭಾವ ಮೆರೆದಿದ್ದಾರೆ.

ಆಗಸ್ಟ್ 10ರಂದು ಮಗಳನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಹೊರಟಿದ್ದ ಮುದ್ದನಾಯಕನಹಳ್ಳಿ ನಿವಾಸಿ ವೆಂಕಟೇಶ್ (42) ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮಗಳು ಯಶಸ್ವಿನಿಗೆ (16) ಬೆಂಗಳೂರಿನ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ 6 ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಶಸ್ವಿನಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಕೊನೆಯುಸಿರೆಳಿದ್ದಾಳೆ. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು 4ರ ಬಾಲಕಿ ಸಾವು

ಕಳೆದ ಗುರುವಾರ ದಾಬಸ್‌ಪೇಟೆ ಕಡೆಯಿಂದ ಬಂದ ಟಿಪ್ಪರ್ ಎದುರುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಟಿಪ್ಪರ್ ಚಕ್ರಕ್ಕೆ ಸಿಕ್ಕಿ ಸ್ಥಳದಲ್ಲೇ ವೆಂಕಟೇಶ್ ಮೃತಪಟ್ಟಿದ್ದರು. ಮುಂಬದಿ ಚಕ್ರಕ್ಕೆ ಸಿಲುಕಿದ ಯಶಸ್ವಿನಿಯ ಕೈ ತುಂಡಾಗಿತ್ತು. ನಗರದ ರಂಗಪ್ಪ ವೃತ್ತದಲ್ಲಿನ ಖಾಸಗಿ ಡ್ರೈವಿಂಗ್‌ ಶಾಲೆಯಲ್ಲಿ ವಾಹನ ತರಬೇತುದಾರರಾಗಿದ್ದ ವೆಂಕಟೇಶ್ ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಬಸವಭವನ ಸಮೀಪದ ಖಾಸಗಿ ಶಾಲೆಗೆ ಮಗಳನ್ನು ಪ್ರತಿದಿನ ಅವರೇ ಬೈಕ್‌ನಲ್ಲಿ ಬಿಟ್ಟು, ಕರೆತರುತ್ತಿದ್ದರು. ಇದನ್ನೂ ಓದಿ: ಗೆಳೆಯನಿಗಾಗಿ ಆತನ ಮಗನನ್ನೇ ಕೊಂದು ಮಂಚದಡಿಯಲ್ಲಿ ಬಚ್ಚಿಟ್ಟಳು!

ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಲಕಿಯ ಒಂದು ಕೈ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದು, ಲಾರಿ ಚಕ್ರದ ಅಡಿಯಲ್ಲಿ ಸಿಲುಕಿರುವ ಬಾಲಕಿಯ ಆಕ್ರಂದನದ ದೃಶ್ಯಗಳು ಮನಕಲುಕುವಂತಿತ್ತು. ಯಶಸ್ವಿನಿ ಗುಣಮುಖರಾಗಲೆಂದು ತಾಲೂಕಿನ ಜನತೆ ನೆರವು ನೀಡಿ, ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಪ್ರಾರ್ಥನೆ ಫಲಿಸದೆ ಯಶಸ್ವಿನಿ ಇದೀಗ ಚಿರನಿದ್ರೆಗೆ ಜಾರಿದ್ದಾಳೆ. ಇದನ್ನೂ ಓದಿ: ಎದೆ ಹಾಲು ಕುಡಿದು ಮಲಗಿದ್ದ 3 ತಿಂಗಳ ಪುಟ್ಟ ಕಂದಮ್ಮ ದುರ್ಮರಣ

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್